Asianet Suvarna News Asianet Suvarna News

ಇಂದಿನಿಂದಲೇ ಒಟ್ಟಿಗೆ 2 ತಿಂಗಳ ಪಡಿತರ ವಿತರಣೆ: ಸಚಿವ ಗೋಪಾಲಯ್ಯ

ಸುವರ್ಣ ನ್ಯೂಸ್‌ ಜತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಆಹಾರ ಪೂರೈಕೆ ಸಚಿವ ಗೋಪಾಲಯ್ಯ, ಇಂದಿನಿಂದಲೇ ಪಡಿತರ ವಿತರಣೆ ಆರಂಭವಾಗಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಿನ ಪಡಿತರವನ್ನು ಒಟ್ಟಿಗೆ ಏಪ್ರಿಲ್ 10ರೊಳಗಾಗಿ ಜನರಿಗೆ ತಲುಪಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು(ಏ.01): ಜಗತ್ತಿನಾದ್ಯಂತ ತಲ್ಲಣ ಮೂಡಿಸಿರುವ ಕೊರೋನಾ ವೈರಸ್‌ ಭಾರತವನ್ನು ಕಾಡುತ್ತಿದೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಹೀಗಿರುವಾಗಲೇ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 2 ತಿಂಗಳ ಪಡಿತರವನ್ನು ಇಂದಿನಿಂದಲೇ(ಏ.01) ವಿತರಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ರೈತರ ನೆರವಿಗೆ ಧಾವಿಸಿದ ಸಿಎಂ: ಇಂದಿನ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಇಂತಿವೆ

ಈ ಕುರಿತಂತೆ ಸುವರ್ಣ ನ್ಯೂಸ್‌ ಜತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಆಹಾರ ಪೂರೈಕೆ ಸಚಿವ ಗೋಪಾಲಯ್ಯ, ಇಂದಿನಿಂದಲೇ ಪಡಿತರ ವಿತರಣೆ ಆರಂಭವಾಗಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಿನ ಪಡಿತರವನ್ನು ಒಟ್ಟಿಗೆ ಏಪ್ರಿಲ್ 10ರೊಳಗಾಗಿ ಜನರಿಗೆ ತಲುಪಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮದುವೆ ಮುಂದೂಡಿ ಕರ್ತವ್ಯ ಮುಂದುವರಿಸಿದ ವೈದ್ಯೆ; ಮಾದರಿಯಾದ ಡಾ. ಶಿಫಾ!

ಇನ್ನು ಬಿಪಿಎಲ್ ಕಾರ್ಡ್‌ ಹೊಂದಿರುವವರಿಗೆ ಎಷ್ಟು, ಅಂತ್ಯೋದಯ ಕಾರ್ಡ್ ಹೊಂದಿರುವವರು ಎಷ್ಟು ಪಡಿತರವನ್ನು ಪಡೆಯಲಿದ್ದಾರೆ ಎನ್ನುವುದನ್ನು ಸಚಿವ ಗೋಪಾಲಯ್ಯ ಅವರ ಮಾತಿನಲ್ಲೇ ಕೇಳಿ.
 

Video Top Stories