Asianet Suvarna News Asianet Suvarna News

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಭೀತಿ: ಹೆಚ್ಚಿದ ಆತಂಕ

ಬೆಂಗಳೂರಿನಲ್ಲಿ 57 ಮಂದಿಗೆ ಕೊರೋನಾ ವೈರಸ್‌ ಪಾಸಿಟಿವ್‌| ಡೆಡ್ಲಿ ವೈರಸ್‌ ಸೋಂಕು ಹರಡದಿರಲು ಜಿಲ್ಲಾಡಳಿತ ಕಟಗ್ಟುನಿಟ್ಟಿನ ನಿಗಾ| ಸಾರ್ವಜನಿಕರು ಬೀದಿಗೆ ಇಳಿಯದಂತೆ ಪೊಲೀಸರ ಬಿಗಿ ಭದ್ರತೆ|

ಬೆಂಗಳೂರು(ಏ.06): ನಗರದಲ್ಲಿ ಮಹಾಮಾರಿ ಕೊರೋನಾ ವೈರಸ್‌ ಆತಂಕ ಹೆಚ್ಚಾಗುತ್ತಿದೆ. ನಗರದಲ್ಲಿ ಇದುವರೆಗೆ 57 ಮಂದಿಗೆ ಕೋವಿಡ್‌-19 ಪಾಸಿಟಿವ್‌ ಬಂದಿದೆ. ಹೀಗಾಗಿ ಬೆಂಗಳೂರಿನ ಜನರು ಭಯ ಪಡುವಂತ ವಾತಾವರಣ ನಿರ್ಮಾಣವಾಗಿದೆ. 

ಕೊರೋನಾಗೆ ಮತ್ತೊಂದು ಹಾಟ್‌ಸ್ಪಾಟ್‌ ದಕ್ಷಿಣ ಕನ್ನಡ: ಜಿಲ್ಲಾದ್ಯಂತ ಕಟ್ಟೆಚ್ಚರ

ನಗರದಲ್ಲಿ ಡೆಡ್ಲಿ ವೈರಸ್‌ ಸೋಂಕು ಹರಡದಿರಲು ಜಿಲ್ಲಾಡಳಿತ ಕಟಗ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರದಾದ್ಯಂತ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸಾರ್ವಜನಿಕರು ಬೀದಿಗೆ ಇಳಿಯದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
 

Video Top Stories