Asianet Suvarna News Asianet Suvarna News

ಮೂವರಿಗೆ ಕೊರೋನಾ ಸೋಂಕು ದೃಢ: ಬೆಳಗಾವಿಯಲ್ಲಿ ಹೈಅಲರ್ಟ್‌!

ಮೂವರಿಗೆ ಕೊರೋನಾ ವೈರಸ್ ತಗುಲಿರುವುದು ದೃಢ| ಸೋಂಕಿತರು ವಾಸಿಸುತ್ತಿದ್ದ ಮೂರು ಕಿ.ಮೀ. ವ್ಯಾಪ್ತಿ ಪ್ರದೇಶಕ್ಕೆ ನಿರ್ಬಂಧ| ಅಗತ್ಯ ವಸ್ತುಗಳನ್ನ ಖರೀದಿ ಮಾಡಲು ಬೆಳಿಗ್ಗೆ 8 ಗಂಟೆಯಿಂದ 10 ರವರೆಗೆ ಸಮಯ ನಿಗದಿ|

ಬೆಳಗಾವಿ(ಏ.04): ಮೂವರಿಗೆ ಕೊರೋನಾ ವೈರಸ್‌ ಪ್ರಕರಣಗಳ ದೃಢಪಟ್ಟ ಹಿನ್ನೆಲೆಯಲ್ಲಿ ಅಲರ್ಟ್‌ ಜಾರಿಯಾಗಿದೆ. ಸೋಂಕಿತರು ವಾಸಿಸುತ್ತಿದ್ದ ಮೂರು ಕಿ.ಮೀ. ವ್ಯಾಪ್ತಿ ಪ್ರದೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಗತ್ಯ ವಸ್ತುಗಳನ್ನ ಖರೀದಿ ಮಾಡಲು ಬೆಳಿಗ್ಗೆ 8 ಗಂಟೆಯಿಂದ 10 ರವರೆಗೆ ಸಮಯ ನಿಗದಿ ಮಾಡಲಾಗಿದೆ. 

ಇಂದಿನಿಂದ ಏ. 14 ರವರೆಗೆ ರಸೆಲ್ ಮಾರ್ಕೆಟ್ ಬಂದ್ !

ರೋಗಿ ನಂ 126 ಬೆಳಗಾವಿ ನಗರ ಪ್ರದೇಶವೊಂದರ ನಿವಾಸಿಯಾಗಿದ್ದು, ರೋಗಿ ನಂ 127, 128 ಬೆಳಗಾವಿ ತಾಲೂಕಿನ ನಿವಾಸಿಗಳಾಗಿದ್ದಾರೆ. ಹೀಗಾಗಿ ಸದರಿ ಪ್ರದೇಶಕ್ಕೆ ಕರ್ತವ್ಯ ನಿರತ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. 
 

Video Top Stories