Asianet Suvarna News Asianet Suvarna News

ಕೊರೋನಾಗೆ ಮತ್ತೊಂದು ಹಾಟ್‌ಸ್ಪಾಟ್‌ ದಕ್ಷಿಣ ಕನ್ನಡ: ಜಿಲ್ಲಾದ್ಯಂತ ಕಟ್ಟೆಚ್ಚರ

ನಾಲ್ಕು ಮಂದಿಗೆ ಕೊರೋನಾ ಸೋಂಕು ದೃಢ| ದೆಹಲಿಯ ಜಮಾತ್‌ಗೆ ಹೋಗಿ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರಿಗೆ ಕೋವಿಡ್- 19 ದೃಢ| ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ವಾಹನ ಸಂಚಾರ ನಿಷೇಧ|

ಮಂಗಳೂರು(ಏ.06): ದೆಹಲಿಯ ಜಮಾತ್‌ಗೆ ಹೋಗಿ ಬಂದಿದ್ದ ನಾಲ್ಕು ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 12 ಕ್ಕೇರಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. 

ಬೆಳಗಾವಿಯಲ್ಲಿ ಮತ್ತೆ ನಾಲ್ವರಿಗೆ ಕೊರೋನಾ ದೃಢ: ಕುಡಚಿಯಲ್ಲಿ ಹೈಅಲರ್ಟ್‌

ಈ ಮೂಲಕ ಜಿಲ್ಲೆ ಡೇಂಜರ್ ಝೋನ್‌ನಲ್ಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಜಿಲ್ಲಾದ್ಯಂತ ವಾಹನ ಸಂಚಾರವನ್ನ ನಿಷೇಧಿಸಿದೆ. ಪಕ್ಕದ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 141 ಪ್ರಕರಣಗಳು ದಾಖಲಾಗಿವೆ. 
 

Video Top Stories