ಚಿಕ್ಕಬಳ್ಳಾಪುರ: ಸೋಶಿಯಲ್ ಡಿಸ್ಟನ್ಸಿಂಗ್‌ಗೆ ಪೊಲೀಸರಿಂದ 'ಬಾಕ್ಸ್' ಐಡಿಯಾ
- ಕೊರೋನಾವೈರಸ್ ಹರಡುವಿಕೆ ತಡೆಗೆ ದೇಶಾದ್ಯಂತ ಲಾಕ್‌ಡೌನ್
- ಎಲ್ಲಾ ಕಡೆ ಸೋಂಕು ತಡೆಗೆ ಸೋಶಿಯಲ್ ಡಿಸ್ಟನ್ಸಿಂಗ್ ಮಂತ್ರ
- ಅವಶ್ಯಕ ಸೇವೆಗಳು ಅಭಾದಿತವಾಗಿರಲು ಅಧಿಕಾರಿಗಳ ಪ್ಲಾನ್
ಚಿಕ್ಕಬಳ್ಳಾಪುರ (ಮಾ.25): ಕೊರೋನಾ ಹರಡುವಿಕೆ ನಿಯಂತ್ರಣಕ್ಕೆ ಸೋಶಿಯಲ್ ಡಿಸ್ಟನ್ಸಿಂಗ್ ಸದ್ಯದ ಮಂತ್ರ. ಇದನ್ನು ಕಾರ್ಯಗತಗೊಳಿಸಲು ಚಿಕ್ಕಬಳ್ಳಾಪುರದ ಅಧಿಕಾರಿಗಳು ಹೊಸ ಐಡಿಯಾ ಮಾಡಿದ್ದಾರೆ.
ಅವಶ್ಯಕ ಸೇವೆಗಳಾದ ಮೆಡಿಕಲ್ ಸ್ಟೋರ್, ತರಕಾರಿ ಅಂಗಡಿಗಳ ಬಳಿ ಜನ ಗುಂಪುಗೂಡದಿರಲು ಅಧಿಕಾರಿಗಳು ಬಾಕ್ಸ್ ಹಾಕಿದ್ದಾರೆ. ಪೊಲೀಸರೇ ಬಾಕ್ಸ್ ನಲ್ಲಿ ನಿಂತು ಮಳಿಗೆಗಳ ಮಾಲಿಕರಿಗೆ ಜಾಗೃತಿ ಮೂಡಿಸಿದರು. ಮೂರು ಅಡಿಗೆ ಒಂದು ಬಾಕ್ಸ್ ಹಾಕಿ ಅಂತರ ಕಾಯುವಂತೆ ಮಾಡಿದ್ದಾರೆ ಅಧಿಕಾರಿಗಳು.
ಇದನ್ನೂ ನೋಡಿ | ಭಾರತ ಲಾಕ್‌ಡೌನ್: ಬೇಕಾಬಿಟ್ಟಿ ಹೊರಗೆ ಬಂದ್ರೆ ಹೀಗೆ ಆಗೋದು!...
ನಗರಸಭೆ ಆಯುಕ್ತರು ಲೋಹಿತ್ ತಹಶಿಲ್ದಾರ್ ನಾಗ ಪ್ರಶಾಂತ್, ಪೊಲೀಸ್ ಅಧಿಕಾರಿಗಳಾದ ಸುದರ್ಶನ್, ವರುಣ್‌ರಿಂದ ಎಲ್ಲಾ ಮಳಿಗೆಗಳ ಬಳಿ ಬಾಕ್ಸ್ ರಚನೆ ಮಾಡಲಾಗಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ರವಿಕುಮಾರ್ ವಾಕ್ ಥ್ರೂ ನಡೆಸಿದ್ದಾರೆ ಬನ್ನಿ ನೊಡೋಣ...
ಇದನ್ನೂ ನೋಡಿ | 21 ದಿನ ಲಾಕ್‌ಡೌನ್ ರಾಜ್ಯಕ್ಕೆ ಯಾಕೆ ಮುಖ್ಯ? ಹೇಳುತ್ತೆ ಈ ವರದಿ!...
"