Asianet Suvarna News Asianet Suvarna News

ಲಾಕ್ ಡೌನ್ ಮುಗಿಯುವವರೆಗೂ  ಬಡವರ ಹಸಿವು ನೀಗಿಸಲು ಮುಂದಾದ ಗರುಡಾಚಾರ್

ಕ್ಷೇತ್ರದ ಜನರು ಹಸಿವು ನೀಗಿಸಲು ಮುಂದಾದ ಶಾಸಕ/ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ರಿಂದ ಮಾದರಿ ಕಾರ್ಯ/ ಸ್ವಯಂ ಸೇವಕರ ಮೂಲಕ ಮನೆ ಮನೆಗೆ ಆಹಾರ ಸಾಮಗ್ರಿ ಪೂರೈಕೆ

ಬೆಂಗಳೂರು(ಏ. 02) ತಮ್ಮ ಕ್ಷೇತ್ರದ ಬಡವರ ಹಸಿವು ನೀಗಿಸಲು ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮುಂದಾಗಿದ್ದಾರೆ. ಪ್ರತಿದಿನ 2000 ಫುಡ್ ಪಾಕೆಟ್ ವಿತರಣೆ ಮಾಡುತ್ತಿದ್ದಾರೆ.

ಬಡವರ ಮನೆಗೆ ಲಾಕ್ ಡೌನ್  ಮುಗಿಯುವವರೆ ಪೂರಕವಾಗುವಷ್ಟು ದಿನಸಿ ವಿತರಣೆ ಮಾಡುವ ಕೈಂಕರ್ಯ ತೊಟ್ಟಿರುವ ಶಾಸಕರು  5 ಕೆಜಿ ಅಕ್ಕಿ, 2 ಕೆಜಿ ಗೋಧಿ, 1.5 ಕೆಜಿ ಬೇಳೆ, 1 ಲೀಟರ್ ಎಣ್ಣೆ, 1 ಕೆಜಿ ಉಪ್ಪು ವಿತರಣೆ ಮಾಡುತ್ತಿದ್ದಾರೆ.

ಸೋಂಕಿತ ಮಗುವಿಗೆ ಚಿಕಿತ್ಸೆ ನೀಡಿದ ದಾದಿಗೆ ಇದೆಂಥಾ ಅಪಮಾನ

ಜನಸಂದಣಿ ಆಗಬಾರದೆಂಬ ಕಾರಣಕ್ಕೆ ಸ್ವಯಂ ಸೇವಕರ ಮೂಲಕ ಮನೆ ಮನೆಗೆ ದಿನಸಿ ಪೂರೈಕೆ ಮಾಡುತ್ತಿದ್ದಾರೆ.  ಕ್ಷೇತ್ರದ ಜನರ ತುರ್ತು ಸೇವೆಗಾಗಿ ನಾಲ್ಕು ಆಟೋ ವ್ಯವಸ್ಥೆ ಸಹ ಮಾಡಿದ್ದಾರೆ. ಬಿಬಿಎಂಪಿ ಔಷಧಿ ಸಿಂಪಡಿಸುವವರ ಜೊತೆ ಮತ್ತಷ್ಟು ಸುರಕ್ಷಾ ವ್ಯವಸ್ಥೆಯನ್ನು ಶಾಸಕರು ಪೂರೈಸಿದ್ದಾರೆ. ಶಾಸಕರ ಕಾರ್ಯವನ್ನು ಜನರು ಮೆಚ್ಚಿ ಕೊಂಡಾಡಿದ್ದಾರೆ.

Video Top Stories