Asianet Suvarna News Asianet Suvarna News

ಚಿಕ್ಕಬಳ್ಳಾಪುರದಲ್ಲಿ ಆತಂಕ ಸೃಷ್ಟಿಸಿದ 12 'ನಿಗೂಢ' ಮಂದಿ

  • ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಘಟನೆ
  • ಲಾಕ್‌ಡೌನ್‌ ನಡುವೆಯೂ ಬೇರೆ ಕಡೆಯಿಂದ ಬಂದ 12 ಮಂದಿ
  • ಕೆಲವರಲ್ಲಿ ಕೊರೋನಾಸೋಂಕಿನ ಲಕ್ಷಣ 

ಚಿಕ್ಕಬಳ್ಳಾಪುರ (ಏ.05): ಚಿಕ್ಕಬಳ್ಳಾಪುರದ ಗುಡಿಬಂಡೆಯ ಮನೆಯೊಂದರಲ್ಲಿ, ಲಾಕ್‌ಡೌನ್‌ ನಡುವೆಯೂ ಬೇರೆ ಕಡೆಯಿಂದ ಬಂದು ಠಿಕಾಣಿ ಹೂಡಿದ್ದ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರ ವಾಸ್ತವ್ಯವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೆಲವರಲ್ಲಿ ಕೊರೋನಾಸೋಂಕಿನ ಲಕ್ಷಣಗಳು ಕೂಡಾ ಕಾಣಿಸಿಕೊಂಡಿವೆ ಎಂದು ಹೇಳಲಾಗಿದೆ.