ಯುವ ಸಿನಿಮಾ ಹೊಸ ಅಪ್‌ಡೇಟ್ಸ್ , ಸಿನಿಮಾಗಾಗಿ ರೆಡಿ ಆಗ್ತಿದೆ ಕೋಟಿ ವೆಚ್ಚದ ಸೆಟ್..!
ಹೊಂಬಾಳೆ ಫಿಲಂಸ್ ಯುವ ಸಿನಿಮಾದ ಬಗ್ಗೆ ಅಪ್ ಡೇಟ್ ಕೊಟ್ಟಿದ್ದು,ಚಿತ್ರದ ಸೆಟ್ ವರ್ಕ್ ಶುರುವಾಗಿ ಎಂದು ತಿಳಿಸಿದೆ.
ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾ ಯುವ ಸಿನಿಮಾದ ಬಗ್ಗೆ ಚಿತ್ರತಂಡ ಅಪ್ ಡೇಟ್ ಕೊಟ್ಟಿದೆ.ಡಾ.ರಾಜ್ ಕುಮಾರ್ ಕುಟುಂಬದ ಯುವ ರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂದೇ ಫ್ಯಾನ್ಸ್ ಅಂದುಕೊಂಡಿದ್ದು, ಹೀಗಾಗಿ ಈ ಸಿನಿಮಾ ಬಗ್ಗೆ ಕುತೂಹಲವಿದೆ. ಬೆಂಗಳೂರಿನ ಹೆಚ್ಎಂಟಿ ಫ್ಯಾಕ್ಟರಿಯಲ್ಲಿ ಭರ್ಜರಿ ಸೆಟ್ ನಿರ್ಮಾಣ ಮಾಡಲಾಗ್ತಿದೆ. ಸಾಹಸ ನಿರ್ದೇಶಕ ಅರ್ಜುನ್ ಡೈರೆಕ್ಷನ್‌ಲ್ಲಿ ಯುವ ಸ್ಟಂಟ್ ಮಾಡುತ್ತಾರೆ. ಏಪ್ರಿಲ್ 9ರಿಂದ ಯುವ ಶೂಟಿಂಗ್ ಮಾಡೋದಾಗಿ ನಿರ್ಮಾಣ ಸಂಸ್ಥೆ ತಿಳಿಸಿದೆ. ಚಿತ್ರದ ಸೆಟ್ ವರ್ಕ್ ಶುರುವಾಗಿದ್ದು, ಸದ್ಯದಲ್ಲೇ ಇಲ್ಲಿ ಪ್ರಮುಖ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದೆ ಎಂದು ಚಿತ್ರತಂಡ ಫೋಟೋ ಶೇರ್ ಮಾಡಿದೆ.ಸಂತೋಷ್ ಅನಂದ್ ರಾಮ್ ಚಿತ್ರದ ನಿರ್ದೇಶಕರಾಗಿದ್ದಾರೆ. ಕಾಂತಾರ ಚೆಲುವೆ ಸಪ್ತಮಿ ಗೌಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.