ದೊಡ್ಮನೆ ಮೊಮ್ಮಗನ 'ಯುವ' ಸಿನಿಮಾ ಶೂಟಿಂಗ್ ಆರಂಭ..!

ಯುವ ರಾಜ್‌ಕುಮಾರ್ ನಟನೆಯ ಮೊದಲ ಚಿತ್ರದ ದೃಶ್ಯಕ್ಕೆ ಸಂತೋಷ್ ಆನಂದ್‌ರಾಮ್ ಕ್ಲಾಪ್‌ ಮಾಡಿದ್ದಾರೆ. ಯುವರಾಜ್‌ಕುಮಾರ್‌ ನಟನೆಯ ಬಹು ನಿರೀಕ್ಷಿತ ‘ಯುವ’ ಚಿತ್ರಕ್ಕೆ  ಏಪ್ರಿಲ್‌ 9 ರಿಂದ ಚಿತ್ರೀಕರಣ ಆರಂಭವಾಗಿದೆ.

First Published Apr 11, 2023, 5:05 PM IST | Last Updated Apr 11, 2023, 5:05 PM IST

ಯುವ ರಾಜ್‌ಕುಮಾರ್ ನಟನೆಯ ಮೊದಲ ಚಿತ್ರದ ದೃಶ್ಯಕ್ಕೆ ಸಂತೋಷ್ ಆನಂದ್‌ರಾಮ್ ಕ್ಲಾಪ್‌ ಮಾಡಿದ್ದಾರೆ. ಯುವರಾಜ್‌ಕುಮಾರ್‌ ನಟನೆಯ ಬಹು ನಿರೀಕ್ಷಿತ ‘ಯುವ’ ಚಿತ್ರಕ್ಕೆ  ಏಪ್ರಿಲ್‌ 9 ರಿಂದ ಚಿತ್ರೀಕರಣ ಆರಂಭವಾಗಿದೆ. ಮೊದಲ ಹಂತದ ಶೂಟಿಂಗ್‌ ಬೆಂಗಳೂರಿನಲ್ಲೇ ನಡೆಯುತ್ತಿದೆ.  ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲಮ್ಸ್‌ ನಿರ್ಮಿಸುತ್ತಿದೆ. ವಿಶೇಷ ಎಂದರೆ ತಮ್ಮ ನಿರ್ದೇಶನದ ‘ಯುವ’ ಚಿತ್ರದ ಮೊದಲ ದೃಶ್ಯಕ್ಕೆ ಸಂತೋಷ್‌ ಆನಂದ್‌ರಾಮ್‌ ಅವರೇ ಕ್ಲಾಪ್‌ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನ ಕೊಟ್ಟರು.ಬೆಂಗಳೂರಿನ ಎಚ್‌ಎಂಟಿ ಫ್ಯಾಕ್ಟ್ರಿಯಲ್ಲಿ ಹಾಕಿರುವ ಸೆಟ್‌ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಸಾಹಸ ನಿರ್ದೇಶಕ ಅರ್ಜುನ್‌ ಅವರ ಸಾರಥ್ಯದಲ್ಲಿ ಆ್ಯಕ್ಷನ್‌ ಸೀನ್‌ಗಳ ಸಂಯೋಜನೆ ನಡೆಯುತ್ತಿದೆ.