ರಾಮ್ ಚರಣ್ ನಟನೆಯ ಸಿನಿಮಾಗೆ ಹೇಗಿದೆ ಪ್ರತಿಕ್ರಿಯೆ?: ಗೇಮ್ ಚೇಂಜರ್ ಚಿತ್ರ ನೋಡಿದ ಪ್ರೇಕ್ಷಕರು ಹೇಳಿದ್ದೇನು?
ರಾಮ್ ಚರಣ್ ತೇಜಾ ನಟನೆಯ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬಂದಿದೆ. ಪಾಲಿಟಿಕಲ್ ಥ್ರಿಲ್ಲರ್ ಮೂವಿಯಾಗಿರೋ ಈ ಚಿತ್ರದಲ್ಲಿ ರಾಮ್ ಚರಣ್ ಅಪ್ಪ-ಮಗನಾಗಿ ದ್ವಿಪಾತ್ರಗಳಲ್ಲಿ ಮಿಂಚಿದ್ದಾರೆ.
ರಾಮ್ ಚರಣ್ ತೇಜಾ ನಟನೆಯ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬಂದಿದೆ. ಪಾಲಿಟಿಕಲ್ ಥ್ರಿಲ್ಲರ್ ಮೂವಿಯಾಗಿರೋ ಈ ಚಿತ್ರದಲ್ಲಿ ರಾಮ್ ಚರಣ್ ಅಪ್ಪ-ಮಗನಾಗಿ ದ್ವಿಪಾತ್ರಗಳಲ್ಲಿ ಮಿಂಚಿದ್ದಾರೆ. ರಾಮ್ ಚರಣ್ ನಟನೆ ಬಗ್ಗೆ ಪ್ರಶಂಸೆ ಕೇಳಿ ಬಂದರೂ ಕಥೆಯಲ್ಲಿ ಹೊಸತನ ಏನಿಲ್ಲ ಅನ್ನೋ ಅಭಿಪ್ರಾಯ ಪ್ರೇಕ್ಷರಿಂದ ಬರ್ತಾ ಇದೆ. ಬರೊಬ್ಬರಿ 500 ಕೋಟಿ ಬಜೆಟ್ನಲ್ಲಿ ಗೇಮ್ ಚೇಂಜರ್ ಸಿದ್ದಗೊಂಡಿದ್ದು ಚಿತ್ರದ ಬಾಕ್ಸಾಫೀಸ್ ಭವಿಷ್ಯ ಏನಾಗುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
‘ಅನ್ಲಾಕ್ ರಾಘವ’ ಚಿತ್ರದ ಹೊಸ ಹಾಡು ಬಿಡುಗಡೆ: ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿರುವ "ಅನ್ ಲಾಕ್ ರಾಘವ" ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ, ಅನೂಪ್ ಸೀಳಿನ್ ಸಂಗೀತ ನೀಡಿರುವ ಹಾಗೂ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿರುವ "ಲಾಕ್ ಲಾಕ್" ಹಾಡು ಇತ್ತೀಚಿಗೆ ಶಿವಮೊಗ್ಗದ ಭಾರತ್ ಸಿನಿಮಾಸ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಸಹಸ್ರಾರು ಕನ್ನಡ ಕಲಾಭಿಮಾನಿಗಳು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು. ಮಿಲಿಂದ್ - ರೆಚೆಲ್ ಡೇವಿಡ್ ಜೋಡಿಯ ಅನ್ ಲಾಕ್ ರಾಘವ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.
ರಾಮರಸ ಚಿತ್ರದಲ್ಲಿ ಮಿಂಚಿರೋ ನಟಿ ಹೆಬ್ಬಾ ಪಟೇಲ್: ಹೆಬ್ಬಾ ಪಟೇಲ್ ಭಾರತೀಯ ಚಲನಚಿತ್ರರಂಗದ ಹೆಸರಾಂತ ನಟಿಯರಲ್ಲಿ ಒಬ್ಬರು. ಕನ್ನಡ ಚಿತ್ರರಂಗದಿಂದ ನಟನೆಯನ್ನ ಶುರು ಮಾಡಿ ಹಲವಾರು ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ ಈ ಬೆಡಗಿ. ಹೆಬ್ಬಾ "ಅಧ್ಯಕ್ಷ" ಚಿತ್ರದಲ್ಲಿ ಶರಣ್ ಅವರ ಜೊತೆ ನಟಿಸಿ ಕನ್ನಡ ಪ್ರೆಕ್ಷಕರಿಗೆ ಮೋಡಿ ಮಾಡಿದ್ರು. ಆ ನಂತರ ತೆಲುಗಿನಲ್ಲಿ 'ಕುಮಾರಿ 21F" ಚಿತ್ರದಲ್ಲಿ ನಟಿಸಿ ಸಿಕ್ಕಾಪಟ್ಟೆ ಸದ್ದು ಮಾಡಿದ್ರು. ಸದ್ಯಕ್ಕೆ ಗುರು ದೇಶಪಾಂಡೆ ನಿರ್ಮಾಣದ , ಬಿ.ಎಂ ಗಿರಿರಾಜ್ ನಿರ್ದೇಶನದ "ರಾಮರಸ" ಚಿತ್ರದಲ್ಲಿ ಹೆಬ್ಬಾ ಒಂದು ಪ್ರಮುಖ ಪಾತ್ರದಲ್ಲಿ ನಟಿಸ್ತಾ ಇದ್ದಾರೆ. ಚಿತ್ರಿಕರಣ ಮುಗಿಸಿರುವ "ರಾಮರಸ" ಚಿತ್ರತಂಡ ಸದ್ಯ ಪೊಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.