ವಿಜಯ್ v/s ಅಜಿತ್; ತಾರಕಕ್ಕೇರಿದ ಫ್ಯಾನ್ ವಾರ್, ಪೋಸ್ಟರ್ ಹರಿದು ಅಭಿಮಾನಿಗಳ ಕಿತ್ತಾಟ; ವಿಡಿಯೋ ವೈರಲ್

ಕಾಲಿವುಡ್‌ನಲ್ಲಿ ದಳಪತಿ ವಿಜಯ್ ಮತ್ತು ಅಜಿತ್ ಅಭಿಮಾನಿಗಳ ಕಿತ್ತಾಟ ತಾರಕಕ್ಕೇರಿದೆ. ಚಿತ್ರಮಂದಿರದ ಮುಂದೆ ಪೋಸ್ಟರ್ ಹರಿದು ಕಿತ್ತಾಡಿಕೊಂಡಿದ್ದಾರೆ.   

First Published Jan 11, 2023, 1:13 PM IST | Last Updated Jan 11, 2023, 1:13 PM IST

ಕಾಲಿವುಡ್‌ನಲ್ಲಿ ಫ್ಯಾನ್ ವಾರ್ ತಾರಕಕ್ಕೇರಿದೆ. ತಲಾ ಅಜಿತ್ ಮತ್ತು ದಳಪತಿ ವಿಜಯ್ ಅಭಿಮಾನಿಗಳ ನಡುವಿನ ಕಿತ್ತಾಟ ಜೋರಾಗಿದೆ.ವಿಜಯ್ ಅತ್ತು ಅಜಿತ್ ಅಭಿಮಾನಿಗಳಿಬ್ಬರೂ ಚಿತ್ರದ ಪೋಸ್ಟರ್ ಹರಿದು ಕಿತ್ತಾಡಿಕೊಳ್ಳುವ ಮಟ್ಟಕ್ಕೆ ತಲುಪಿದೆ. ದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾ ಮತ್ತು ಅಜಿತ್ ಕುಮಾರ್ ನಟನೆಯ ತುಣಿವು ಸಿನಿಮಾ ಒಂದೇ ದಿನ ತೆರೆಗೆ ಬಂದಿದೆ. ದಳಪತಿ ವಿಜಯ್ ಮತ್ತು ಅಜಿತ್ ಅಭಿಮಾನಿಗಳು ಸಿನಿಮಾ ನೋಡಲು ಚೆನ್ನೈನ ಚಿತ್ರಮಂದಿರದ ಮುಂದೆ ಹಾಜರಾಗಿದ್ದರು. ಚಿತ್ರಮಂದಿರದ ಹೊರಭಾಗದಲ್ಲಿದ್ದ ವಾರಿಸು ಪೋಸ್ಟರ್ ಅನ್ನು ಅಜಿತ್ ಅಭಿಮಾನಿಗಳು ಹರಿದು ಹಾಕಿದರು. ಅದೇ ಸಮಯಕ್ಕೆ ವಿಜಯ್ ಅಭಿಮಾನಿಗಳು ಸಹ ತುಣಿವು ಪೋಸ್ಟರ್ ಹರಿದು ಹಾಕಿದರು. ಪೋಸ್ಟರ್ ಹರಿದುಹಾಕುವ ಮೂಲಕ ಪ್ರಾರಂಭವಾದ ಜಗಳ ತಾರಕಕ್ಕೇರಿತು. ಪೋಸ್ಟರ್ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಪರಿಸ್ಥಿತಿ ಬಿಗುಡಾಯಿಸುತ್ತಿದ್ದಂತೆ ಸ್ಥಳಕ್ಕೆ ಎಂಟ್ರಿ ಕೊಟ್ಟ ಪೊಲೀಸರು ಅಜಿತ್ ಮತ್ತು ವಿಜಯ್ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿ ಅಭಿಮಾನಿಗಳನ್ನು ಚದುರಿಸಿದರು.