ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ: ಎಂಗೇಜ್ ಆದ ವರುಣ್‌ ತೇಜ್‌-ಲಾವಣ್ಯ ತ್ರಿಪಾಠಿ

ಸಿನಿಮಾದಲ್ಲಿ ಒಂದಾದ ಜೋಡಿಗಳು ರಿಯಲ್ ಲೈಫಿನಲ್ಲೂ ಒಂದಾದ ಬಹಳ ಉದಾಹರಣೆಗಳಿವೆ. ಅದರಂತೆ ಇದೀಗ ತೆಲುಗು ಚಿತ್ರರಂಗದಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರುತ್ತಿದೆ.

First Published Jun 11, 2023, 2:23 PM IST | Last Updated Jun 11, 2023, 2:23 PM IST

ಮೆಗಾಸ್ಟಾರ್ ಚಿರಂಜೀವಿ ಸೋದರ ನಾಗಬಾಬು ಪುತ್ರ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ಒಬ್ಬರನ್ನೊಬ್ಬರು ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೈದರಾಬಾದ್’ನ ಸ್ವಗೃಹದಲ್ಲಿ ಸರಳವಾಗಿ ಎಂಗೇಜ್ಮೆಂಟ್ ನಡೆದಿದೆ. ವರುಣ್ ತೇಜ್ ಹಾಗೂ ಲಾವಣ್ಯಾ ತ್ರಿಪಾಠಿ ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಿಂದಲೂ ಈ ಜೋಡಿ ಪ್ರೀತಿಯಲ್ಲಿತ್ತು ಎನ್ನಲಾಗುತ್ತಿದೆ. ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್ ಕುಟುಂಬ, ರಾಮ್ ಚರಣ್ ಕುಟುಂಬ, ಪವನ್ ಕಲ್ಯಾಣ್ ನಿಶ್ಚಿತಾರ್ಥಕ್ಕೆ ಆಗಮಿಸಿ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ. ಇದೇ ವರ್ಷ ನವೆಂಬರ್ ತಿಂಗಳಲ್ಲಿ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ.

Video Top Stories