ರಾಮ್ ಚರಣ್ ಹಣಕ್ಕಾಗಿ ಮದುವೆಯಾದ್ರಾ...ಮೆಗಾಸ್ಟಾರ್ ಸೊಸೆ ಬಿಚ್ಚಿಟ್ಟ ಸತ್ಯವೇನು?
ರಾಮ್ ಚರಣ್ ಉಪಾಸನಾ ಮದುವೆಯಾದ ಪ್ರಾರಂಭದ ದಿನಗಳಲ್ಲಿ ಆದ ಟ್ರೋಲ್ ಬಗ್ಗೆ ಅನುಭವಿಸಿದ್ದ ನಿಂದನೆಗಳನ್ನು ಎದುರಿಸಿದ ಟೀಕೆಗಳನ್ನು ಉಪಾಸನಾ ನೆನಪಿಸಿಕೊಂಡಿದ್ದಾರೆ.
ರಾಮ್ ಚರಣ್ ಪತ್ನಿ ಉಪಾಸನಾ ತಾಯಿಯಾಗುತ್ತಿದ್ದಾರೆ. ಮದುವೆಯಾಗಿ 10 ವರ್ಷದ ನಂತರ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಮೊದಲ ಮಗುವನ್ನು ಸ್ವಾಗತಿಸುತ್ತಿದ್ದಾರೆ. ಸಂತಸದ ದಿನಗಳ ಜೊತೆಗೆ ಉಪಾಸನಾ ಮದುವೆಯಾದ ಪ್ರಾರಂಭದ ದಿನಗಳಲ್ಲಿ ಆದ ಟ್ರೋಲ್ ಬಗ್ಗೆ ಅನುಭವಿಸಿದ್ದ ನಿಂದನೆಗಳನ್ನು ಎದುರಿಸಿದ ಟೀಕೆಗಳನ್ನು ಉಪಾಸನಾ ನೆನಪಿಸಿಕೊಂಡಿದ್ದಾರೆ. ಮದುವೆಯಾದ ಹೊಸತರಲ್ಲಿ ನಾನು ಬಹಳಷ್ಟು ಅಪಮಾನಗಳನ್ನು ಎದುರಿಸಬೇಕಾಯಿತು. ಹಲವರು ನನ್ನ ಬಾಡಿಶೇಮಿಂಗ್ ಮಾಡಿದರು. ದಪ್ಪಗಿದ್ದಾಳೆ, ಸುಂದರವಾಗಿಲ್ಲ ಎಂದು ಹೇಳಿದರು. ಮಾತ್ರವಲ್ಲ, ರಾಮ್ ಚರಣ್, ಹಣಕ್ಕಾಗಿ ನನ್ನನ್ನು ವಿವಾಹವಾಗಿದ್ದಾರೆ ಎಂದರು. ಆದರೆ ಅದನ್ನೆಲ್ಲ ನಾವು ಸಹಿಸಿಕೊಂಡೆವು. ಆಗ ನಮ್ಮನ್ನು ಟೀಕಿಸಿದವರ ಅಭಿಪ್ರಾಯ ಈಗ ಬದಲಾಗಿದೆ. ಆದರೆ ಆಗ ಎಲ್ಲವನ್ನೂ ಸಹಿಸಿಕೊಂಡು ಮುಂದೆ ನಡೆದಿದ್ದಕ್ಕೆ ನನ್ನ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.