Asianet Suvarna News Asianet Suvarna News

ಸಮುದ್ರ ಮಕ್ಕಳ ಕಥೆ ಹೇಳುತ್ತಿದೆ ದೇವರ ಮಸ್ತ್ ಟ್ರೈಲರ್: ಕಿಕ್ ಕೊಡುತ್ತಿದೆ ಜೂ.ಎನ್‌ಟಿಆರ್‌-ಸೈಫ್ ಜುಗಲ್ಬಂಧಿ!

ಕಳೆದ ವರ್ಷ ಅದ್ಯಾವಾಗ ಈ ಸಿನಿಮಾದ ಪೋಸ್ಟರ್ ಒಂದು ರಿವೀಲ್ ಆಯ್ತೋ ನೊಡಿ.. ಚಿಂದಿ ಗುರು ಅನ್ನೋ ಉದ್ಘಾರ ಕೇಳಿ ಬಂದಿತ್ತು.. ಅದರ ಹಿಂದೆನೆ ಬಂದ ಟೀಸರ್, ಸೆನ್ಸೇಷನಲ್ ಸೃಷ್ಟಿಸಿ ಬಿಡ್ತು.

First Published Sep 12, 2024, 4:22 PM IST | Last Updated Sep 12, 2024, 4:22 PM IST

ವರ್ಷದ ಮೋಸ್ಟ್ ಎಕ್ಸ್ಕ್ಟೆಡ್ ಸಿನಿಮಾ ದೇವರ.. ಜ್ಯೂನಿಯರ್ ಎನ್ಟಿಆರ್ ನಟನೆಯ ದೇವರ ಇದೇ ತಿಂಗಳ ೨೭ ಕ್ಕೆ ಚಿತ್ರಮಂದಿರಗಳಲ್ಲಿ ದರ್ಶನ ಕೊಡಲು ರೆಡಿಯಾಗಿದ್ದಾನೆ.. ಆದ್ರೆ ಅದಕ್ಕೂ ಮೊದಲು ದೇವರ ಸ್ಪೆಷಾಲಿಟಗಳೇನು..? ಸಿನಿಮಾ ಹೇಗಿರಲಿದೆ.. ಅನ್ನೋದನ್ನ ಈ ಟ್ರೇಲರ್ ರಿವೀಲ್ ಮಾಡಿದೆ. ಕೆಲವೊಂದು ಸಿನಿಮಾಗಳೆ ಹಾಗೆ, ಅದ್ಯಾವಾಗ ನೋಡ್ತಿವೋ ಅನ್ನೋ ಮಟ್ಟಿಗೆ ಕ್ಯೂರಿಯಾಸಿಟಿ ಹುಟ್ಟುಹಾಕಿ ಬಿಡ್ತಾವೆ. ಅದ್ರಲ್ಲೂ ಆ ಸಿನಿಮಾದ ಕಾಂಬಿನೇಷನ್ಗೆ ಅದಕ್ಕೆ ಅಡಿಪಾಯ ಹಾಕಿಬಿಟ್ಟಿರುತ್ತೆ.. ಅಂತಹ ಸಾಳಿಗೆ ಸೇರುವ ಸಿನಿಮಾನೆ ದೇವರ. ಇದು ಟಾಲಿವುಡ್ ಹೈವೋಲ್ಟೇಜ್ ಕಾಂಬೋ ಜ್ಯೂನಿಯರ್ ಎನ್ಟಿಆರ್ ಹಾಗು ಕೊರಟಾಲ ಶಿವ ಸಮಾಗಮದಲ್ಲಿ ಬರ್ತಿರೋ ಸಿನಿಮಾ.. ಹಾಗಾಗಿನೆ ಚಿತ್ರದ ಬಗ್ಗೆ ಇಷ್ಟೇಲ್ಲಾ ನಿರೀಕ್ಷೆಗಳು ಗರಿಗೆದರಿರೋದು.  

ಕಳೆದ ವರ್ಷ ಅದ್ಯಾವಾಗ ಈ ಸಿನಿಮಾದ ಪೋಸ್ಟರ್ ಒಂದು ರಿವೀಲ್ ಆಯ್ತೋ ನೊಡಿ.. ಚಿಂದಿ ಗುರು ಅನ್ನೋ ಉದ್ಘಾರ ಕೇಳಿ ಬಂದಿತ್ತು.. ಅದರ ಹಿಂದೆನೆ ಬಂದ ಟೀಸರ್, ಸೆನ್ಸೇಷನಲ್ ಸೃಷ್ಟಿಸಿ ಬಿಡ್ತು.. ಇನ್ನು ಹಾಡುಗಳಂತು ಸಿನಿ ಇಂಡಸ್ಟ್ರೀಯಲ್ಲಿ ಹೊಸ ಅಲೆಯನ್ನ ಎಬ್ಬಿಸಿವೆ,, ಈ ನಡುವೆ ಸಿನಿಮಾ ಡೇಟ್ ಕೂಡ ಅನೌನ್ಸ್ ಆಗಿ ಇದೇ ೨೭ ಕ್ಕೆ ಸಿನಿಮಾ ರಿಲೀಸ್ ಆಗೋದು ಕನ್ಫರ್ಮ್ ಆಗೋಯ್ತು. ಭಟ್ ಯಾವಾಗ ಟ್ರೇಲರ್ ಅಂತಾ ಬೆರಗುಗಣ್ಣಿನಿಂದಲೇ ಅತ್ತ ನೋಡ್ತಿರುವಾಗ್ಲೇ ಇದೀಗ ಟ್ರೇಲರ್ ರಿಲೀಸ್ ಮಾಡಿ ತಾರಕ್ ಅಭಿಮಾನಿಗಳಿಗೆ ಗ್ರೇಟೆಸ್ಟ್ ಟ್ರೀಟ್ ಕೊಟ್ಟಿದೆ ಚಿತ್ರತಂಡ. ಟ್ರೇಲರ್ ನೋಡಿರೋ ತಾರಕ್ ಅಭಿಮಾನಿಗಳು ಸೂಪರ್ಬ್ ಸೂಪರ್ಬ್ ಅಂತಾ ಸೆಲೆಬ್ರೇಷನ್ ಮಾಡೋಕೆ ಶುರು ಮಾಡಿದ್ದಾರೆ.. ಡಬ್ಬಲ್ ರೋಲ್ನಲ್ಲಿ ಯಂಗ್ ಟೈಗರ್ ಕಣ್ತುಂಬಿಕೊಂಡು ಥ್ರಿಲ್ ಆಗಿದ್ದಾರೆ.. ಕಡಲ ಕಿನಾರೆಯಲ್ಲಿ ಕತೆ ಕೇಳಿ ಕಳೆದೋಗಿದ್ದಾರೆ. 

ಪ್ರಕಾಶ್ ರಾಜ್ ಹಿನ್ನಲೆ ಧ್ವನಿಯಲ್ಲೇ ಶುರುವಾಗುವ ಟ್ರೇಲರ್, ಹೊಸ ಜಗತ್ತಿನ ಅನಾವರಣ ಮಾಡಿದೆ.. ಸಮುದ್ರದ ಮಕ್ಕಳ ಕಥೆ ಹೇಳುತ್ತಿದೆ.. ಇನ್ನು ಚಿತ್ರದಲ್ಲಿ ಜಭರ್ಧಸ್ತ್ ಆದ ಆಕ್ಷನ್ ಸೀನ್ಸ್, ತಾರಕ್ರ ಸ್ಟಂಟ್ಸ್ ಮೈನವರೇಳಿಸುತ್ತೆ. ಅಂದಹಾಗೆ, ದೇವರ ಚಿತ್ರದಲ್ಲಿ ಯಂಗ್ ಟೈಗರ್, ಅಪ್ಪ ದೇವರ ಹಾಗು ಮಗ ವರದ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಆಫ್ಟರ್ ಎ ಲಾಂಗ್ ಗ್ಯಾಪ್ ಬಳಿಕ ಡಬ್ಬಲ್ ರೋಲ್ನಲ್ಲಿ ಜ್ಯೂನಿಯರ್ ಎನ್ಟಿಆರ್ ಕಿಕ್ ಏರಿಸ್ತಿದ್ದಾರೆ. ದೇವರ ಧೈರ್ಯವಂತಾಗಿದ್ದೆ, ಮಗ ದೊಡ್ಡ ಪುಕ್ಕಲನಾಗಿ ದರ್ಶನ ಕೊಟ್ಟಿದ್ದಾರೆ.. ಆದ್ರೆ ಇಲ್ಲಿನ ಹೈಲೇಟ್ ಅಂದ್ರೆ ಸೈಫ್ ಅಲಿ ಖಾನ್.. 

ಒನ್ಸ್ ಅಗೈನ್ ಟಾಲಿವುಡ್ಗೆ ಎಂಟ್ರಿಕೊಟ್ಟಿರೋ ಸೈಫ್, ಭೈರನಾಗಿ ಅಬ್ಬರಿಸಿ ಬೊಬ್ಬರೆದಿದ್ದಾನೆ. ಅದೊಂದ ಸಮುದ್ರದ ಬಳಿ ಇರೋ ಪುಟ್ಟ ಊರು.. ಆ ಊರಿನಲ್ಲಿ ದೇವರ ಹಾಗು ಭೈರ ಇಬ್ಬರೂ ಬೆಸ್ಟ ಫ್ರೆಂಡ್ಸ್ ಅನ್ನೊದನ್ನ ಮೊದಲು ತೋರಿಸಿದ್ರು, ಇಬ್ಬರ ಹಾದಿ ಬೇರೆ ಅನ್ನೋದನ್ನ ಸಹ ಹೇಳ್ತಿದೆ. ದೇವರ ಇಲ್ಲಿ ಊರಿನ ಜನರ ಪರ ನಿಲ್ಲುವ ನಾಯಕನಾಗಿದ್ರೆ,. ಭೈರ ತನ್ನದೇ ಆದ ಕ್ರೂರ ಗ್ಯಾಂಗ್ ಕಟ್ಟಿಕೊಂಡು ದರೋಡ ಮಾಡುವ ದಂಡನಾಯಕನಾಗಿದ್ದಾನೆ..  ಹಾಗಾದ್ರೆ ಇವಬ್ಬರು ಗಳೆಯರ ಹಾದಿ ಬೇರೆ ಯಾಗಿದ್ದಾಕೆ..? ಅವರ ನಡುವಿನ ಹಗೆತನಕ್ಕೆ ಕಾರಣ ಏನು ಹೀಗೆ ನೂರೆಂಟು ಪ್ರಶ್ನೆಗಳನ್ನ ಹುಟ್ಟುಹಾಕಿದೆ ಟ್ರೇಲರ್.. ಅದಲ್ಲದೆ ಕೊನೆಯಲ್ಲಿ ತಿಮಿಂಗಿನ ಮೇಲೆ ದೇವರ ಕೊಡುವ ಎಂಟ್ರಿ ಅಂತೂ ಅದ್ಭುತ. 

ಈ ಚಿತ್ರದ ಮೂಲಕ ಸೌತ್ಗೆ ಶ್ರಿದೇವಿ ಪುತ್ರಿ ಜಾಹ್ನವಿ ಕಪೂರ್ ಎಂಟ್ರಿಕೊಟ್ಟಿದ್ದು, ಲಂಗ ದವಣಿ ಹಾಕಿ ಪಡ್ಡೆಹೈಕ್ಳ ಮನಸ್ಸು ಕದ್ದಿದ್ದಾರೆ.. ಯುವಸುಧಾ ಆರ್ಟ್ಸ್ ಹಾಗೂ ಎನ್ಟಿಆರ್ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ. ರತ್ನವೇಲು ಛಾಯಾಗ್ರಹಣ ಹಾಗೂ ಅನಿರುದ್ದ್ ರವಿಚಂದರ್ ಸಂಗೀತ ’ದೇವರ’ ಚಿತ್ರಕ್ಕಿದೆ. ಶ್ರೀಕಾಂತ್, ಪ್ರಕಾಶ್ ರಾಜ್, ಮುರಳಿ ಶರ್ಮಾ, ಅಜಯ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರ ದಂಡೇ ಇಲ್ಲಿದೆ> ಒಟ್ನಲ್ಲಿ ಥ್ರಿಬ್ಬಲ್ ಆರ್ ಸಿನಿಮಾ ಬಂದು ಸುಮಾರು ಎರಡು ವರ್ಷಗಳ ಬಳಿಕ ತಾಕರ್ ದರ್ಶನವಾಗ್ತಿದೆ.. ಈಗಾಗ್ಲೇ ಟೀಸರದ್ ಹಾಗು ಹಾಡುಗಳಿಗೆ ಸೂಪರ್ಬ್ ರೆಸ್ಪಾನ್ಸ್ ಸಿಕ್ಕಿದ್ದು, ಟ್ರೇಲರ್ಗೆ ಅದು ದುಪ್ಪಟ್ಟಾಗಿದೆ.. ಐದು ಭಾಷೆಗಳಲ್ಲಿ ಟ್ರೇಲರ್ ರಿವಿಲ್ ಆಗಿದ್ದು, ಮಿಲಿಯನ್ಸ್ಗಟ್ಟಲೆ ವೀವ್ಸ್ ಪಡೆದು, ದಾಖಲೆ ಬರೆದಿದೆ.. ಎನಿ ವೇ ಇನ್ನೇನು ಕೆಲವೇ ದಿನಗಳಲ್ಲಿ ಥಿಯೇಟರ್ಗಳಲ್ಲಿ ದೇವರ ದರ್ಶನ ಕೊಡಲಿದ್ದು, ಅಲ್ಲಿ ಏನೆಲ್ಲಾ ರೆಕಾರ್ಡ್ ಮಾಡಲಿದ್ದಾನೆ ಅನ್ನೋದನ್ನ ಕಾದುನೋಡ್ಬೇಕಿದೆ.