ಇಡೀ ಊರಿನ ಜನರಿಗೆ ಉಚಿತ ಲಸಿಕೆ ಹಾಕಿಸಿದ ಮಹೇಶ್ ಬಾಬು!
ಸಂಕಷ್ಟದ ಕಾಲದಲ್ಲಿ ನಟರು ಜನರ ಕಷ್ಟಕ್ಕೆ ಜೊತೆಯಾದರೆ ಜನರು ಅವರನ್ನು ಮತ್ತಷ್ಟು ಪ್ರೀತಿಯಿಂದ ನೋಡುತ್ತಾರೆ. ಈ ಕಷ್ಟಕಾಲದಲ್ಲಿ ಆಂಧ್ರಪ್ರದೇಶ ಬುರ್ರಿಪಾಲಂ ಎಂಬ ಊರಿನ ಜನರಿಗೆ ಉಚಿತ ಲಸಿಕೆ ಹಾಕಿಸುವ ಮೂಲಕ ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಮಾದರಿಯಾಗಿದ್ದಾರೆ. ತಂದೆ, ಸೂಪರ್‌ಸ್ಟಾರ್ ಕೃಷ್ಣ ಅವರ ಹುಟ್ಟುಹಬ್ಬ ಪ್ರಯುಕ್ತ ಊರಿನ ಮಂದಿಗೆ ಉಚಿತ ವ್ಯಾಕ್ಸಿನ್ ಹಾಕಿಸಿರುವ ಅವರು, ‘ಸಹಜ ಜೀವನಕ್ಕೆ ಲಸಿಕೆಯೊಂದೇ ಭರವಸೆಯಾಗಿದೆ. ಬುರ್ರಿಪಾಲಂ ಊರಿನ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡುವ ಮೂಲಕ ಸಮಾಜಕ್ಕೆ ಪ್ರೀತಿ ಹಿಂತಿರುಗಿಸಿದ್ದೇನೆ’ ಎಂದು ಹೇಳಿದ್ದಾರೆ. ಸೆಲಬ್ರಿಟಿಗಳು ಈ ರೀತಿಯ ಮಾದರಿ ಕೆಲಸ ಮಾಡಿದರೆ ಕೊರೋನಾ ಗೆಲ್ಲುವುದು ಸುಲಭವಾಗಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment