Asianet Suvarna News Asianet Suvarna News

ಮಲೆಯಾಳಂನಲ್ಲಿ ಪಾತ್ರಕ್ಕಾಗಿ ಪಲ್ಲಂಗ ಮುಖ ರಿವೀಲ್: ನನಗೂ ಈ ಅನುಭವ ಆಗಿತ್ತು ಎಂದ ದಿಗ್ಗಜ ನಟನ ಪುತ್ರಿ!

ಮಲೆಯಾಳಂ ಇಂಡಸ್ಟ್ರಿ ಹಿಟ್​ ಸಿನಿಮಾಗಳನ್ನ ಕೊಡುತ್ತಿದೆ. ನಮ್ ಸ್ಯಾಂಡಲ್​ವುಡ್​ ಗೆ ಅಂತಹ ಟ್ಯಾಲೆಂಟೇ ಇಲ್ಲ ಅಂತ ದಿನ ನಿತ್ಯ ಗಾಂಧಿನಗರ ಪಡಸಾಲೆಯಲ್ಲಿ ಗಂಟೆ ಗಟ್ಟಲೇ ಚರ್ಚೆ ಆಗುತ್ತೆ. ಆದ್ರೆ ಮಲೆಯಾಳಂ ಜಗತ್ತಿನ ಕರಾಳ ಕತೆಗಳು ಬಗ್ಗೆ ಗೊತ್ತಾ.? 
 

First Published Aug 24, 2024, 4:54 PM IST | Last Updated Aug 24, 2024, 4:55 PM IST

ಜಗತ್ತಿನ ಕರಾಳ ಕತೆಗಳು ಬಗ್ಗೆ ಗೊತ್ತಾ.? ಜಸ್ಟಿಸ್ ​ಹೇಮಾ ನೇತೃತ್ವದ ಕಮಿಟಿ ಆದ ಮೇಲೆ ಆ ಒಂದೊಂದೇ ಕಥೆಗಳು ಹೊರ ಬರುತ್ತಿವೆ. ಇದೀಗ ಟಾಲಿವುಡ್​ನ ದಿಗ್ಗಜ ನಟನ ಪುತ್ರಿಗೂ ಪಲ್ಲಂಗದ ಕರಾಳ ಅನುಭವ ಆಗಿ ನೊಂದು ಬೆಂದು ಹೋಗಿದ್ದೇನೆ ಅಂದಿದ್ದಾರೆ ಹಾಗಾದ್ರೆ ಯಾರದು ದಿಗ್ಗಜ ನಟನ ಪುತ್ರಿ.? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್. ಮಲೆಯಾಳಂ ಚಿತ್ರರಂಗಕ್ಕೆ ಹತ್ತಿರೋ ಕಪ್ಪು ಮಸಿ, ಇಲ್ಲಿನ ಸಿನಿಮಾ ಕರ್ಮಿಗಳು ನಟಿಯರನ್ನ ಮಂಚಕ್ಕೆ ಕರಿತಾರೆ ಅನ್ನೋದು. ಮಲೆಯಾಳಂ ಚಿತ್ರರಂಗದಲ್ಲಿ ಈ ಪಲ್ಲಂಗದ ಹವಾಳಿ ಹೆಚ್ಚಾಗಿದೆ ಅಂತಾನೆ ಸರ್ಕಾರ ಜಸ್ಟಿಸ್ ​ಹೇಮಾ ನೇತೃತ್ವದ ಕಮಿಟಿ ರಚಿಸಿ ವರಧಿ ಕೊಡುವಂತೆ ಕೇಳಿತ್ತು. 

ಸದ್ಯ ಹೇಮಾ ಕಮಿಟಿ ನೀಡಿದ ವರದಿಯದಲ್ಲಿ ಕೇಳಿ ಬರುತ್ತಿರುವ ಆರೋಪಗಳೆಲ್ಲಾ ನಿಜ ಎಂದು ಹೇಳಲಾಗಿದೆ. ಹೇಮಾ ಕಮಿಟಿ ವರದಿಯ ಬಗ್ಗೆ ಭಾರತೀಯ ಚಿತ್ರರಂಗದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಹಲವು ನಟ-ನಟಿಯರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ತೆಲುಗುನ ದಿಗ್ಗಜ ನಟ ಮೋಹನ್ ಬಾಬು ಪುತ್ರಿ ನಟಿ ಮಂಚು ಲಕ್ಷ್ಮಿ ಕೂಡ ಮೌನ ಮುರಿದಿದ್ದಾರೆ. ನಾನು ಸ್ಟಾರ್ ನಟನ ಮಗಳಾದ್ರು ಚಿತ್ರರಂಗದಲ್ಲಿ ತಮಗೂ ಪಲ್ಲಂಗಕ್ಕೆ ಕರೆದ ಕಹಿ ಅನುಭವ ಆಗಿತ್ತು. ಕರಿಯರ್ ಆರಂಭದಲ್ಲಿ ನನಗೂ ಕಿರುಕುಳ ಎದುರಾಗಿತ್ತು ಎಂದಿದ್ದಾರೆ. ಬಣ್ಣದ ಜಗತ್ತು ಹೊರಗಿನಿಂದ ನೋಡೋಕೆ ಅಷ್ಟೆ ಚಂದ. ಆದ್ರೆ ಅದರ ಒಳಗೆ ಹೋದ್ರೆ ಸಿಗೋ ಕರಾಳ ಕತೆಗಳು ನೂರಾರಲ್ಲ ಸಾವಿರಾರು. ಸ್ಯಾಂಡಲ್​ವುಡ್​ ಕೂಡ ಇದರಿಂದ ಹೊರತಾಗಿಲ್ಲ. ಅದ್ಭುತ ಸಿನಿಮಾಗಳು ಬಂದಿವೆ ಅಂತ ಸುದ್ದಿಯಾಗಿದ್ದಕ್ಕಿಂತ ಹೆಚ್ಚಾಗಿ ವಿವಾದ ಪಲ್ಲಂಗದ ವಿಚಾರಗಳಿಂದಲೇ ಭಾರಿ ಸುದ್ದಿ ಮಾಡಿದೆ ಸ್ಯಾಂಡಲ್​ವುಡ್​.

Video Top Stories