ಸಾಲದ ಸುಳಿಯಲ್ಲಿ ಬಾಹುಬಲಿ ಪ್ರಭಾಸ್?: ಸಾಲಕ್ಕಾಗಿ ಪ್ರಾಪರ್ಟಿ ಅಡವಿಟ್ಟ ಸಾಹೋ ಹೀರೋ?
ಸಾಲ ಮಾಡಿ ಆದ್ರು ತುಪ್ಪ ತಿನ್ನು ಗೋಳು ಪರದಾಟ ಸಾಕಿನ್ನು ಅಂತ ದುನಿಯಾ ಸಿನಿಮಾದಲ್ಲಿ ರಂಗಾಯಣ ರಘು ಹಾಡಿದ್ರು. ಈ ಹಾಡು ಇಂದಿಗೂ ಸೂಪರ್ ಹಿಟ್.. ಇದೀಗ ಈ ಹಾಡಿನ ಇನ್ಸ್ಪರೇಷನ್ನಿಂದಲೇ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಏನಾದ್ರ ಸಾಲಾ ಮಾಡಿದ್ರಾ..?
ಸಾಲ ಮಾಡಿ ಆದ್ರು ತುಪ್ಪ ತಿನ್ನು ಗೋಳು ಪರದಾಟ ಸಾಕಿನ್ನು ಅಂತ ದುನಿಯಾ ಸಿನಿಮಾದಲ್ಲಿ ರಂಗಾಯಣ ರಘು ಹಾಡಿದ್ರು. ಈ ಹಾಡು ಇಂದಿಗೂ ಸೂಪರ್ ಹಿಟ್.. ಇದೀಗ ಈ ಹಾಡಿನ ಇನ್ಸ್ಪರೇಷನ್ನಿಂದಲೇ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಏನಾದ್ರ ಸಾಲಾ ಮಾಡಿದ್ರಾ..? ಹೀಗೊಂದು ಡೌಟ್ ಶುರುವಾಗಿದೆ. ಯಾಕಂದ್ರೆ ಬಾಹುಬಲಿ ಪ್ರಭಾಸ್‌ಗೆ ಹಣಬಲ ಕಡಿಮೆ ಆಗಿದೆ. ಪ್ರಭಾಸ್ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಅಂತ ಟಾಲಿವುಡ್‌ನಲ್ಲಿ ಸುದ್ದಿಯೊಂದು ಹೊರ ಬಂದಿದೆ. ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್. ಈ ಸಾಹೋ ಹೀರೋ ಒಂದ್ ಸಿನಿಮಾಗೆ ಏನಿಲ್ಲ ಅಂದ್ರು 100 ಕೋಟಿ ಸಂಭಾವನೆ ಪಡೆಯುತ್ತಾರೆ.
ಭಾರತೀಯ ಚಿತ್ರರಂಗದ ಕಾಸ್ಟ್ಲಿ ಹೀರೋಗಳಲ್ಲಿ ಪ್ರಭಾಸ್ ಕೂಡ ಒಬ್ರು. ಆದ್ರೆ ಪ್ರಭಾಸ್ ಹೆಸರಲ್ಲಿ 21 ಕೋಟಿ ಸಾಲ ಇದೆಯಂತೆ. ಹೈದರಾಬಾದ್‌ನಲ್ಲಿರೋ ಬೆಲೆಬಾಳೋ ಆಸ್ತಿಯನ್ನ ಅಡವಿಟ್ಟು ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರಂತೆ. ಪ್ರಭಾಸ್ ಬಳಿ ಸದ್ಯ ಐದು ಮೆಗಾ ಸಿನಿಮಾಗಳಿವೆ. ಈ ಸಿನಿಮಾಗಳಿಂದ ಕನಿಷ್ಟ 500 ಕೋಟಿ ಸಂಭಾವನೆ ಪ್ರಭಾಸ್ ಜೇಬು ಸೇರುತ್ತೆ. ಆದ್ರೆ ರಾಧೆ ಶ್ಯಾಮ್, ಸಾಹೋ ಸೋಲು ಪ್ರಭಾಸ್ರನ್ನ ಸಾಲ ಮಾಡೋ ಹಾಗೆ ಮಾಡಿದೆ. ಯಾಕಂದ್ರೆ ಮೇಲ್ನೋಟಕ್ಕೆ ಸಾಹೋ ಹಾಗು ರಾಧೆ ಶ್ಯಾಮ್ ಸಿನಿಮಾ ನಿರ್ಮಾಪಕರು ಬೇರೆಯವರು. ಆದ್ರೆ ಈ ಚಿತ್ರಗಳಿಗೆ ಪ್ರಭಾಸ್ ಕೂಡ ಬಂಡವಾಳ ಹೂಡಿದ್ದಾರಂತೆ. ಈಗ ಈ ಸಿನಿಮಾಗಳ ಸೋಲಿನಿಂದ ನಷ್ಟ ಅನುಭವಿಸಿರೋ ಸಿನಿಮಾ ವಿತರಕರಿಗೆ ನಷ್ಟ ತುಂಬಿಕೊಡಲು ಪ್ರಭಾಸ್, ತನ್ನ ಪ್ರಾಪರ್ಟಿಯನ್ನ ಅಡವಿಟ್ಟು 21 ಕೋಟಿ ಸಾಲ ಪಡೆದಿದ್ದಾರಂತೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment