ಹೇಗಿದ್ದ ಬಾಲಿವುಡ್ ಈಗ ಯಾಕೆ ಹೀಗಾಯ್ತು? ಶಾರುಖ್, ಹೃತಿಕ್‌ಗೂ ಕಾಡ್ತಾ ಇದ್ಯಾ ಬಾಯ್ಕಾಟ್ ಭೀತಿ?

ಬಾಲಿವುಡ್‌ಗೆ ಬಾಯ್ಕಾಟ್ ಅನ್ನೋದು ಶಾಪದ ಹಾಗೆ ಕಾಡ್ತಾ ಇದೆ. ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗ್ತಾ ಇವೆ. ದುಡ್ಡು ಮಾಡೋದು ಬಿಡಿ, ಒಳ್ಳೆ ಹೆಸರೂ ಕೂಡ ಮಾಡ್ತಾ ಇಲ್ಲ. ಇದರ ಹಿಂದಿರೊ ಅಸಲಿ ಕತೆ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್. 

First Published Aug 21, 2022, 9:51 PM IST | Last Updated Aug 21, 2022, 9:52 PM IST

ಆಗೆಲ್ಲಾ ಸಿನಿಮಾ ಸಕ್ಸಸ್ ನೋಡಿ ಸಂತಸ ಪಡ್ತಾ ಇದ್ದ ಪ್ರೇಕ್ಷಕ, ಈಗ ಸಿನಿಮಾ ಫೇಲ್ ಆಗೋದು ನೋಡಿ ಸಂಭ್ರಮಿಸ್ತಾ ಇದ್ದಾನೆ. ಲಾಲ್ ಸಿಂಗ್ ಚಡ್ಡಾ ಬಿದ್ದಾಯ್ತು. ರಕ್ಷಾಬಂಧನ್ ಅಟ್ಟರ್ ಫ್ಲಾಪ್ ಆಯ್ತು. ದೋಬಾರಾ ಮುಳುಗೋಯ್ತು. ಮುಂದಿನ ಸರದಿ ಯಾರದ್ದು.? ಸೌತ್ ಇಂಡಿಯಾದ ವಿಜಯ್ ದೇವರಕೊಂಡನಾ? ಅಥವಾ ಬಾಲಿವುಡ್ ಬಿಗ್ ಸ್ಟಾರಾ.?  ಹೇಗಿದ್ದ ಬಾಲಿವುಡ್ ಈಗ ಯಾಕೆ ಹೀಗಾಯ್ತ.? ಶಾರುಖ್, ಹೃತಿಕ್‌ಗೂ ಬೈಕಾಟ್ ಭೀತಿ ಕಾಡ್ತಾ ಇದ್ಯಾ?  ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್.. ಇನ್ನು ಬಾಯ್ಕಾಟ್ ಬಾಲಿವುಡ್ ಅಸಲಿ ಸೀಕ್ರೆಟ್ ಏನು ಆ ಉತ್ತರ? ಬಾಯ್ಕಾಟ್ ಭಾಗ್ಯಕ್ಕೆ ಬಾಲಿವುಡ್ ಮಂದಿ ಭಯ ಪಡೋದ್ಯಾಕೆ? ಶಾರುಖ್, ಹೃತಿಕ್ ಅವರಿಗೂ ಈ ಭೀತಿ ಕಾಡ್ತಾ ಇರೋದೇಕೆ? ಅದೆಲ್ಲಕ್ಕೂ ಉತ್ತರ ಕೊಡ್ತೀವಿ, ಆದ್ರೆ ಅದಕ್ಕಿಂತಾ ಮುಂಚೆ ಒಂದು ಸ್ಮಾಲ್ ಬ್ರೇಕ್. ಬಾಲಿವುಡ್‌ಗೆ ಬಾಯ್ಕಾಟ್ ಅನ್ನೋದು ಶಾಪದ ಹಾಗೆ ಕಾಡ್ತಾ ಇದೆ. ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗ್ತಾ ಇವೆ. ದುಡ್ಡು ಮಾಡೋದು ಬಿಡಿ, ಒಳ್ಳೆ ಹೆಸರೂ ಕೂಡ ಮಾಡ್ತಾ ಇಲ್ಲ. ಇದರ ಹಿಂದಿರೊ ಅಸಲಿ ಕತೆ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್. ಹಾಗಾದ್ರೆ ಬಾಯ್ಕಾಟ್ ಆದ ಸಿನಿಮಾಗಳೆಲ್ಲಾ ಫ್ಲಾಪ್ ಆದ್ವಾ? ಹಾಗೇನೂ ಇಲ್ಲ. ಸಿನಿಮಾ ಚೆನಾಗಿದ್ರೆ ಪ್ರೇಕ್ಷಕ ಪ್ರಭು ನೋಡ್ತಾನೆ. ಇಲ್ಲದಿದ್ರೆ ಟಾಕಿಸ್ ಕಡೆ ಕಣ್ಣೆತ್ತಿಯೂ ನೋಡಲ್ಲ. ಆದರೆ ಬಾಯ್ಕಾಟ್ ಅಭಿಯಾನ ಜನರಲ್ಲಿ ಆ ಸಿನಿಮಾ ಮೇಲೆ ತಿರಸ್ಕಾರ ಭಾವ ಮೂಡಿಸೋ ಸಾಧ್ಯತೆನ ಹೆಚ್ಚಾಗಿರುತ್ತೆ. ಇದಾಗಿತ್ತು ಇವತ್ತಿನ ಸುವರ್ಣ ಫೋಕಸ್..

ಹೆಚ್ಚಿನ ಸಿನಿಮಾ ವಿಡಿಯೋ ನೋಲು ಕ್ಲಿಕಿಸಿ: Asianet Suvarna Entertainment