ಅಭಿಷೇಕ್-ಐಶ್ವರ್ಯ ರೈ ವಿರಸಕ್ಕೆ ಕಾರಣವಾ ಆ ನಟಿ?: ವಿಚ್ಛೇದನಕ್ಕೆ ಕಾರಣನ ಅಕ್ರಮ ಸಂಬಂಧ?

ಬಹಳಷ್ಟು ದಿನಗಳಿಂದ ಐಶ್ವರ್ಯ ರೈ, ಬಚ್ಚನ್ ನಿವಾಸವನ್ನ ತೊರೆದು ಪ್ರತ್ಯೇಕವಾಗಿ ಮಗಳ ಜೊತೆಗೆ ವಾಸ ಮಾಡ್ತಾ ಇದ್ದಾರೆ. ಇತ್ತೀಚಿಗೆ ಅನಂತ್ ಅಂಬಾನಿ ಮದುವೆಗೂ ಬಚ್ಚನ್ ಫ್ಯಾಮಿಲಿ ಪ್ರತ್ಯೇಕವಾಗಿ ಬಂದ್ರೆ, ಐಶ್ವರ್ಯ ಮಗಳ ಜೊಗೆಗೆ ಸಪರೇಟ್​ ಆಗಿ ಬಂದಿದ್ರು. 
 

First Published Oct 13, 2024, 9:59 AM IST | Last Updated Oct 13, 2024, 10:01 AM IST

ಐಶ್ವರ್ಯ ರೈ -ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿ ಹರಿದಾಡೋದಕ್ಕೆ ಶುರುವಾಗಿ ತುಂಬಾನೇ ದಿನ ಆಯ್ತು. ಈ ತಾರಾದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಲ್ಲವಾದ್ರೂ ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡ್ತಾ ಇದ್ದಾರೆ. ಸದ್ಯ ಇವರಿಬ್ಬರ ವಿರಸದ ಹಿಂದೆ ಒಬ್ಬ ನಟಿಯಿದ್ದಾಳೆ ಅನ್ನೋ ಗರ್ಮಾ ಗರಂ ಸುದ್ದಿ ಬಿ ಟೌನ್​ ಅಂಗಳದಲ್ಲಿ ಹರಿದಾಡ್ತಾ ಇದೆ. ಯಾರು ಆ ನಟಿ..? ಏನಿದು ಹೊಸ ಸುದ್ದಿ..? ಬಾಲಿವುಡ್ ಅಂಗಳದಲ್ಲಿ ಒಂದು ಗರ್ಮಾ ಗರಂ ಸುದ್ದಿ ಸದ್ದು ಮಾಡ್ತಾ ಇದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ದಾಂಪತ್ಯ ಜೀವನದಲ್ಲಿ ಒಡುಕು ಮೂಡಿದೆ ಅನ್ನೋದು ಹಳೆ ಸುದ್ದಿ. ಆದ್ರೆ ಈ ಒಡಕಿಗೆ ಕಾರಣ ಒಬ್ಬ ನಟಿ ಅನ್ನೋದು ಸದ್ಯದ ಗುಲ್ಲಾಗ್ತಾ ಇರೋ ಬಿಗ್ ನ್ಯೂಸ್. 

2022ರಲ್ಲಿ ಓಟಿಟಿ ಯಲ್ಲಿ ರಿಲೀಸ್ ಆದ ದಸ್ವಿ ಅನ್ನೋ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಲೀಡ್ ರೋಲ್​ ಮಾಡಿದ್ದು,  ಈ ಸಿನಿಮಾದಲ್ಲಿ ಸಹನಟಿಯಾಗಿ ನಟಿಸ್ತಾ ಇದ್ದ ನಿಮ್ರಿತ್ ಕೌರ್ ಜೊತೆಗೆ ಅಭಿಷೇಕ್ ಆಪ್ತತೆ ಬೆಳೆಸಿಕೊಂಡಿದ್ರಂತೆ. ನಿಮ್ರಿತ್ ಜೊತೆಗಿನ ಅಭಿಷೇಕ್ ಬಚ್ಚನ್ ಒಡನಾಟ ಐಶ್ ಕಣ್ಣು ಕೆಂಪಗಾಗಿಸಿತ್ತಂತೆ. ಹೌದು ಸದ್ಯ ಬಿ ಟೌನ್ ಅಂಗಳದಲ್ಲಿ ಹರಿದಾಡ್ತಾ ಇರೋ ಸುದ್ದಿ ಪ್ರಕಾರ ಅಭಿಷೇಕ್ ಬಚ್ಚನ್ ಮತ್ತು ನಿಮ್ರಿತಾ ಕೌರ್ ನಡುವಿನ ಅಕ್ರಮ ಸಂಬಂಧವೇ ಐಶ್-ಅಭಿ ದಾಂಪತ್ಯ ಮುರಿದು ಬೀಳೋದಕ್ಕೆ ಕಾರಣ. ಎಚ್ಚರಿಕೆ ನೀಡಿದ ನಂತರವೂ ಅಭಿಷೇಕ್-ನಿಮ್ರಿತ್ ಲವ್ವಿ ಡವ್ವಿ ಮುಂದುವರೆದಿದ್ದನ್ನ ನೋಡಿ ಐಶ್ವರ್ಯ ಪ್ರತ್ಯೇಕವಾಗಿ ವಾಸ ಮಾಡತೊಡಿಗಿದ್ರಂತೆ. 

ಬಹಳಷ್ಟು ದಿನಗಳಿಂದ ಐಶ್ವರ್ಯ ರೈ, ಬಚ್ಚನ್ ನಿವಾಸವನ್ನ ತೊರೆದು ಪ್ರತ್ಯೇಕವಾಗಿ ಮಗಳ ಜೊತೆಗೆ ವಾಸ ಮಾಡ್ತಾ ಇದ್ದಾರೆ. ಇತ್ತೀಚಿಗೆ ಅನಂತ್ ಅಂಬಾನಿ ಮದುವೆಗೂ ಬಚ್ಚನ್ ಫ್ಯಾಮಿಲಿ ಪ್ರತ್ಯೇಕವಾಗಿ ಬಂದ್ರೆ, ಐಶ್ವರ್ಯ ಮಗಳ ಜೊಗೆಗೆ ಸಪರೇಟ್​ ಆಗಿ ಬಂದಿದ್ರು. ಅಭಿಷೇಕ್ - ಐಶ್ವರ್ಯ ಇದೂವರೆಗೂ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿಲ್ಲ. ಆದ್ರೆ ಇಬ್ಬರೂ ದೂರ ದೂರ ಇದ್ದಾರೆ ಅನ್ನೋದಂತೂ ಖಚಿತವಾಗಿದೆ. ಮತ್ತೀಗ ಅದಕ್ಕೆ ಕಾರಣ ಏನು ಅನ್ನೋದು ಕೂಡ ರಿವೀಲ್ ಆಗಿದೆ. ಈ ವಿಷ್ಯ ಕೇಳಿ ಐಶು ಫ್ಯಾನ್ಸ್ ಅಂತೂ ಕೆರಳಿ ಕೆಂಡ ಆಗಿದ್ದಾರೆ. ಅಂಥಾ ವಿಶ್ವಸುಂದರಿ  ಐಶ್ವರ್ಯಳನ್ನ ಬಿಟ್ಟು ಈಕೆ ಹಿಂದೆ ಬಿದ್ದಿರೋ ಅಭಿಷೇಕ್​ಗೆ ತಲೆಕೆಟ್ಟಿದೆಯಾ ಅಂತ ಆಡಿಕೊಳ್ತಾ ಇದ್ದಾರೆ.