ಅಪ್ಪುವಿನ ಸ್ಫೂರ್ತಿ ಪಡೆದ ಅಲ್ಲು ಅರ್ಜುನ್-ರಾಮ್ ಚರಣ್ ಮಾಡಿದ್ದೇನು?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅನೇಕರಿಗೆ ಸ್ಫೂರ್ತಿ. ಅಪ್ಪುಯಿಂದ ಸ್ಫೂರ್ತಿ ಪಡೆದ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ಇಬ್ಬರೂ ವಿಶೇಷ ಅಭಿಮಾನಿಯನ್ನು ಭೇಟಿಯಾಗಿ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ. 

First Published Feb 12, 2023, 2:22 PM IST | Last Updated Feb 12, 2023, 3:25 PM IST

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅನೇಕರಿಗೆ ಸ್ಫೂರ್ತಿ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಗಣ್ಯರಿಗೂ ಸ್ಫೂರ್ತಿಯಾಗಿದ್ದಾರೆ. ಲಕ್ಷಾಂತ ಮಂದಿಗೆ ಪುನೀತ್ ರಾಜ್ ಕುಮಾರ್ ಪ್ರೇರಣೆಯಾಗಿದ್ದಾರೆ. ಅದರಲ್ಲಿ ಟಾಲಿವುಡ್ ಸ್ಟಾರ್ ಗಳಾದ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ಕೂಡ ಹೌದು. ಅಪ್ಪು ಅವರಿಂದ ಸ್ಫೂರ್ತಿ ಪಡೆದು ತೆಲುಗು ಸ್ಟಾರ್ ಗಳು ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ರಾಮ್ ಚರಣ್ ಕ್ಯಾನ್ಸರ್ ಪೀಡಿತ ಮಗುವಿನ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ. ಆಸ್ಪತ್ರೆಗೆ ಹೋಗಿ ಭೇಟಿ ಮಾಡಿದ ರಾಮ್ ಚರಣ್ ಅಭಿಮಾನಿಯ ಕಿಚಿತ್ಸೆಗೂ ಸಹಾಯ ಮಾಡಿದ್ದಾರೆ. ಅಲ್ಲು ಅರ್ಜುನ್ ಕೂಡ ಹಾಗೆ. ಇತ್ತೀಚೆಗೆ ವಿಕಲಚೇತನ ಅಭಿಮಾನಿಯನ್ನು ಎತ್ತಿಕೊಂಡು ಪ್ರೀತಿ ವ್ಯಕ್ತಪಡಿಸಿದ್ರು. ಈ ಸ್ಟಾರ್ ಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.