Asianet Suvarna News Asianet Suvarna News

ದುಬಾರಿ ಕಾರು, ಐಷಾರಾಮಿ ಬಂಗಲೆ, ಫಾರ್ಮ್ ಹೌಸ್‌ಗಳ ಒಡೆಯ ಮೆಗಾ ಕುಟುಂಬದ ದೊರೆ ಚಿರಂಜೀವಿ!

ಟಾಲಿವುಡ್​​ನ ಮೆಗಾಸ್ಟಾರ್ ಚಿರಂಜೀವಿಯನ್ನ ಇಡೀ ಟಿಟೌನ್ ಜಗತ್ತು ಸಾವಿರ ಕೋಟಿಗೊಬ್ಬ ಚಿರಂಜೀವಿ ಅಂತ ಕರೀತಿದ್ದಾರೆ. ಯಾಕ್ ಗೊತ್ತಾ.? ಮೆಗಾ ಸ್ಟಾರ್​ನ ಮೆಗಾ ಆಸ್ತಿ ವಿಷ್ಯಾ ಈಗ ತೆಲುಗು ಚಿತ್ರ ಜಗತ್ತಿನಲ್ಲಿ ಭಾರಿ ಸುದ್ದಿಯಾಗ್ತಿದೆ. 
 

First Published Aug 24, 2024, 4:38 PM IST | Last Updated Aug 24, 2024, 4:38 PM IST

ಟಾಲಿವುಡ್​​ನ ಮೆಗಾಸ್ಟಾರ್ ಚಿರಂಜೀವಿಯನ್ನ ಇಡೀ ಟಿಟೌನ್ ಜಗತ್ತು ಸಾವಿರ ಕೋಟಿಗೊಬ್ಬ ಚಿರಂಜೀವಿ ಅಂತ ಕರೀತಿದ್ದಾರೆ. ಯಾಕ್ ಗೊತ್ತಾ.? ಮೆಗಾ ಸ್ಟಾರ್​ನ ಮೆಗಾ ಆಸ್ತಿ ವಿಷ್ಯಾ ಈಗ ತೆಲುಗು ಚಿತ್ರ ಜಗತ್ತಿನಲ್ಲಿ ಭಾರಿ ಸುದ್ದಿಯಾಗ್ತಿದೆ. ಹಾಗಾದ್ರೆ ಮೆಗಾ ಸ್ಟಾರ್ ಸಂಪಾದಿಸಿರೋ ಮೆಗಾ ಆಸ್ತಿ ಎಷ್ಟು..? ಚಿರಂಜೀವಿ ಅಷ್ಟೊಂದು ಶ್ರೀಮಂತನಾ..? ನೋಡೋಣ ಬನ್ನಿ. ಚಿರಂಜೀವಿ.. ಟಾಲಿವುಡ್​​ನ ಮೆಗಾ ಫ್ಯಾಮಿಲಿಯ ಪ್ರೈಡ್​.. ಅಪಾರ ಅಭಿಮಾನಿಗಳನ್ನು ಹೊಂದಿರೋ ಸ್ಟಾರ್. ಚಿರಂಜೀವಿಗೆ 69 ವರ್ಷ ವಯಸ್ಸು. 35 ವರ್ಷಗಳಿಂದ ಬಣ್ಣದ ಜಗತ್ತಿನಲ್ಲಿದ್ದು 25 ವರ್ಷದಿಂದ ಟಾಲಿವುಡ್​ಅನ್ನ ಆಳುತ್ತಿರೋ ಮೆಗಾಸ್ಟಾರ್ ಚಿರು ಇದುವರೆಗೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 

ಹಲವು ಸೂಪರ್​ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಈ ವೃತ್ತಿಯಲ್ಲಿ ಅಭಿಮಾನಿಗಳನ್ನ ಸಂಪಾಧಿಸಿದ್ದಷ್ಟೆ ಅಲ್ಲ ನೂರಾರು ಕೋಟಿ ಹಣವನ್ನೂ ಜೇಬಿಗಿಳಿಸಿಕೊಂಡಿದ್ದಾರೆ. ಇಂತಹ ಚಿರಂಜೀವಿ ಈಗ ಟಾಲಿವುಡ್​ ಚಿತ್ರ ಜಗತ್ತಿನ ಶ್ರೀಮಂತ ನಟ ಅನ್ನೋ ಹೆಗ್ಗಳಿಕೆ ಪಡೆದಿದ್ದಾರೆ. ಚಿರು ಬಳಿ ದುಬಾರಿ ಕಾರುಗಳು ಇವೆ. 9 ಕೋಟಿ ರೂಪಾಯಿ ಮೊತ್ತದ ರಾಲ್ಸ್ ರಾಯ್ಸ್ ಫಾಂಟಮ್, 1.2 ಕೋಟಿ ರೂಪಾಯಿ ವೆಚ್ಚದ ರೇಂಜ್ ರೋವರ್, 90 ಲಕ್ಷ ಮೌಲ್ಯದ ಟೊಯೋಟಾ ಲಾಂಡ್ ಕ್ಯೂಸರ್, 2.5 ಕೋಟಿ ರೂಪಾಯಿ ವೆಚ್ಚದ ಮರ್ಸಿಡೀಸ್ ಬೆನ್ಜ್ಎಎಂಜಿ ಕಾರು ಇದೆ. ಇಷ್ಟೇ ಅಲ್ಲದೆ 190 ಕೋಟಿ ರೂಪಾಯಿ ವೆಚ್ಚದ ಪ್ರೈವೆಟ್ ಜೆಟ್ ಕೂಡ ಇದೆ. ಒಟ್ನಲ್ಲಿ 1650 ಕೋಟಿ ಒಡೆಯನಾಗೋ ಮೂಲಕ ಚಿರಂಜೀವಿ ಸೌತ್ ಸಿನಿ ಜಗತ್ತಿನ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.