'ಕಿಸ್' ಸಿನಿಮಾ ನಟ ವಿರಾಟ್‌ಗೆ ಆ್ಯಕ್ಷನ್ ಹೇಳ್ತಾರಂತೆ ಡೈರೆಕ್ಟರ್ ಸೂರಿ
ನಿರ್ದೇಶಕ 'ದುನಿಯಾ' ಸೂರಿ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದು, 'ಕಿಸ್' ಸಿನಿಮಾದ ಮೂಲಕ ಫೇಮಸ್ ಆದ ನಟ ವಿರಾಟ್ ಜತೆ ಈ ಬಾರಿ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.
.ನಿರ್ದೇಶಕ 'ದುನಿಯಾ' ಸೂರಿ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದು, 'ಕಿಸ್' ಸಿನಿಮಾದ ಮೂಲಕ ಫೇಮಸ್ ಆದ ನಟ ವಿರಾಟ್ ಜತೆ ಈ ಬಾರಿ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.ಈಗಾಗಲೇ 'ಅದ್ಧೂರಿ ಲವರ್' ಮತ್ತು 'ರಾಯಲ್' ಎಂಬ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದು ಅವರ ಮೂರನೇ ಸಿನಿಮಾವಾಗಲಿದೆ. 'ನನ್ನ 'ದುನಿಯಾ' ಸಿನಿಮಾದ ಸಮಯದಿಂದಲೂ ನಿರ್ಮಾಪಕ ಜಯಣ್ಣ ಅವರ ಜತೆಗಿನ ನನ್ನ ಬಾಂಧವ್ಯ ಚೆನ್ನಾಗಿದೆ. ಅವರ ನಿರ್ಮಾಣದಲ್ಲಿ ವಿರಾಟ್‌ನಂತಹ ಪ್ರತಿಭಾವಂತ ಹುಡುಗನಿಗೆ ನನ್ನ ಮುಂದಿನ ಸಿನಿಮಾ ಮಾಡುತ್ತೇನೆ. ಇದೊಂದು ಕಂಪ್ಲೀಟ್ ಆ್ಯಕ್ಷನ್ ಸಿನಿಮಾ ಆಗಲಿದ್ದು, ವಿರಾಟ್‌ಗೆ ಹೊಂದಿಕೊಳ್ಳುವಂತಹ ಕಥೆ ಮಾಡುತ್ತಿದ್ದೇನೆ. ಈಗಾಗಲೇ ಸ್ಕ್ರಿಪ್ಟ್ ಕೆಲಸಗಳು ಆರಂಭವಾಗಿವೆ. ಅಭಿಷೇಕ್ ಜತೆಗಿನ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ರಿಲೀಸ್ ಆದ ತಕ್ಷಣವೇ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ' ಎಂದು ಹೇಳಿದ್ದಾರೆ ನಿರ್ದೇಶಕ 'ದುನಿಯಾ' ಸೂರಿ.