ತಲೈವಾಗೂ ಮಳೆ ಕಾಟ: ಸೂಪರ್​ ಸ್ಟಾರ್ ರಜನಿಕಾಂತ್ ಬಂಗಲೆಗೆ ನುಗ್ಗಿದ ನೀರು!

ತಮಿಳುನಾಡಿನಲ್ಲಿ ರಣಭೀಕರ ಮಳೆ ಸುರೀತಾ ಇದ್ದು, ಚೆನ್ನೈ ಅಂತೂ ಮಳೆಯ ಹೊಡೆತಕ್ಕೆ ತತ್ತರಿಸಿ ಹೋಗಿದೆ. ಈ ಮಳೆಯ ಕಾಟಕ್ಕೆ ಜಸ್ಟ್ ಜನಸಾಮಾನ್ಯರಷ್ಟೇ ಅಲ್ಲ ಸೆಲೆಬ್ರಿಟಿಗಳೂ ಕಂಗಾಲಾಗಿದ್ದಾರೆ. ಅಷ್ಟೆಲ್ಲಾ ಯಾಕೆ ಸೂಪರ್ ಸ್ಟಾರ್ ರಜನಿಕಾಂತ್​​ಗೂ ಮಳೆಯ ಎಫೆಕ್ಟ್ ಅಗಿದೆ. 

First Published Oct 17, 2024, 12:49 PM IST | Last Updated Oct 17, 2024, 12:49 PM IST

ತಮಿಳುನಾಡಿನಲ್ಲಿ ರಣಭೀಕರ ಮಳೆ ಸುರೀತಾ ಇದ್ದು, ಚೆನ್ನೈ ಅಂತೂ ಮಳೆಯ ಹೊಡೆತಕ್ಕೆ ತತ್ತರಿಸಿ ಹೋಗಿದೆ. ಈ ಮಳೆಯ ಕಾಟಕ್ಕೆ ಜಸ್ಟ್ ಜನಸಾಮಾನ್ಯರಷ್ಟೇ ಅಲ್ಲ ಸೆಲೆಬ್ರಿಟಿಗಳೂ ಕಂಗಾಲಾಗಿದ್ದಾರೆ. ಅಷ್ಟೆಲ್ಲಾ ಯಾಕೆ ಸೂಪರ್ ಸ್ಟಾರ್ ರಜನಿಕಾಂತ್​​ಗೂ ಮಳೆಯ ಎಫೆಕ್ಟ್ ಅಗಿದೆ. ತಲೈವಾ ಬಂಗಲೆಗೆ ನೀರು ನುಗ್ಗಿದ್ದು ರಜನಿ ಫ್ಯಾಮಿಲಿ ಪರದಾಡುವಂತೆ ಆಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗ್ತಾ ಇದೆ. ಕರ್ನಾಟಕದಲ್ಲೂ ಮಳೆ ಸೃಷ್ಟಿಸಿರೋ ಅವಾಂತರ ನಿಮಗೆ ಗೊತ್ತೇ ಇದೆ. 

ಅದರಲ್ಲೂ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಬಿಡದೆ ಸುರಿಯುತ್ತಿರುವ ಮಳೆಗೆ ಚೆನ್ನೈನಲ್ಲಿನ ಜನರ ಜೀವನ ಅಸ್ತವ್ಯಸ್ತವಾಗಿದೆ. ಇನ್ನೂ 2-3 ದಿನ  ಭಾರೀ ಮಳೆಯಾಗುತ್ತೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ  ನೀಡಿದೆ. ಸೋ ಚೆನ್ನೈನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚೆನ್ನೈನಲ್ಲಿ ಹಲವು ಏರಿಯಾಗಳು ಜಲಾವೃತ ಆಗಿದ್ದು ಜನಸಾಮಾನ್ಯರು ಪರದಾಡ್ತಾ ಇದ್ದಾರೆ. ಅಷ್ಟೆಲ್ಲಾ ಯಾಕೆ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಮನೆಗೂ ನೀರು ನುಗ್ಗಿದೆ. ರಜನಿ ಮನೆ ಆವರಣದ ತುಂಬಾ ನೀರು ನಿಂತಿದ್ದು ಮನೆಮಂದಿ ಹೊರಬರೋದಕ್ಕೆ ಪರದಾಡೋ ಪರಿಸ್ಥಿತಿ ಬಂದಿದೆ. ಅಸಲಿಗೆ ರಜನಿಕಾಂತ್ ಐಷರಾಮಿ ಬಂಗಲೆ ಇರೋದು ಚೆನ್ನೈನ ಪ್ರತಿಷ್ಠಿತ ಪೋಯಸ್ ಗಾರ್ಡನ್​ನಲ್ಲಿ. 

ಈ ಏರಿಯಾದಲ್ಲಿ ರಜನಿಕಾಂತ್ ಮಾತ್ರ ಅಲ್ಲ ತಮಿಳುನಾಡಿನ ಹೆಸರಾಂ.ತ ರಾಜಕಾರಣಿಗಳು, ಚಿತ್ರನಟರು ಮತ್ತು ಉದ್ಯಮಿಗಳ ಬಂಗಲೆಗಳಿವೆ. ಇಂಥಾ ಪ್ರತಿಷ್ಠಿತ ಏರಿಯಾನೇ ನೀರು ತುಂಬಿರೋದು ನೋಡಿ ಜನಸಾಮಾನ್ಯರು ನಮ್ದೆಲ್ಲಾ ಒಂದು ದೊಡ್ಡ ವಿಷ್ಯನೇ ಅಲ್ಲ ಬಿಡಿ ಅಂತ ಸಮಾಧಾನವಾಗಿದ್ದಾರೆ. ಅಸಲಿಗೆ ಈ ಪ್ರತಿಷ್ಠಿತ ಬಡಾವಣೆಯಲ್ಲಿ ಮಳೆ ನೀರಿನ ನಿರ್ವಹಣೆಗೆ ಅತ್ಯಾಧುನಿಕ ವ್ಯವಸ್ಥೆ ಇದೆ. ಆದರೂ ಮಳೆಯ ಆರ್ಭಟದೆದುರು ಅವೆಲ್ಲವೂ ಫೇಲ್ ಆಗಿವೆ.  ತೆರೆ ಮೇಲೆ ಅಸಾಧ್ಯವಾದುದನ್ನೆಲ್ಲಾ ಮಾಡೋ ತಲೈವಾ, ಸದ್ಯ ಈ ನೀರು ಹೊರಹಾಕೋದು ಹೇಗಪ್ಪಾ ಅಂತ ತಲೆಕೆಡಿಸಿಕೊಂಡಿದ್ದಾರೆ.   ಪ್ರಕೃತಿಯ ಮುನಿಸಿನೆದ್ರು ಸ್ಟಾರ್ ಆದ್ರೇನೂ.. ಸಾಮಾನ್ಯನಾದ್ರೇನು.. ಸೋಲಲೇಬೇಕು ಅನ್ನೋದನ್ನ ಈ ಘಟನೆ ಸಾರಿ ಹೇಳಿದೆ.