ಮಗನ ಮದುವೆಯಲ್ಲಿ ಸುಮಲತಾ ಭರ್ಜರಿ ಸ್ಟೆಪ್: ವಾವ್ ಎಂದ್ರು ತಾರೆಯರು

ರೆಬೆಲ್ ಸ್ಟಾರ್ ಅಂಬಿ ಪುತ್ರ ಅಭಿ ‌ಆಗೂ ಅವಿವಾ ಬಿದ್ದಪ್ಪರ ಸಂಗೀತ್ ಕಾರ್ಯಕ್ರಮದಲ್ಲಿ, ಸುಮಲತಾ ಅಂಬರೀಶ್ ಸಕ್ಕತ್ ಸ್ಟೆಪ್ ಹಾಕಿದ್ದಾರೆ. ಇದೀಗ ವಿಡಿಯೋ ಫುಲ್ ವೈರಲ್ ಆಗಿದೆ. 

First Published Jun 14, 2023, 12:27 PM IST | Last Updated Jun 14, 2023, 12:27 PM IST

ಜೂನ್ 5 ರಂದು ವಿವಾಹವಾಗಿದ್ದ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪರ ಸಂಗೀತ್ ಕಾರ್ಯಕ್ರಮವು ಶನಿವಾರ ರಾತ್ರಿ ಅದ್ದೂರಿಯಾಗಿ ಜರುಗಿತು. ಅದ್ದೂರಿ ಮದುವೆ, ಆರತಕ್ಷತೆ ಬಳಿಕ ಸಂಗೀತ್ ಪಾರ್ಟಿಯನ್ನು ಸಹ ಬಲು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಸ್ಯಾಂಡಲ್ ವುಡ್, ಟಾಲಿವುಡ್ ಹಾಗೂ ಮಾಲಿವುಡ್'ನ ಹಲವು ತಾರೆಯರು ಈ ಸಂಗೀತ್'ನಲ್ಲಿ ಪಾಲ್ಗೊಂಡಿದ್ದರು. ಸುಮಲತಾ ತಮ್ಮ ಸಹೋದರಿಯರ ಜೊತೆ ಸೇರಿ ಟಂಟಂ ಹಾಡಿಗೆ ಸ್ಟೆಪ್ ಹಾಕಿದ್ದು, ಆ ವಿಡಿಯೋ ಫುಲ್ ವೈರಲ್ ಆಗಿದೆ.

Video Top Stories