Asianet Suvarna News Asianet Suvarna News

Sneha: ಲಾಭವೂ ಇಲ್ಲ, ಅಸಲೂ ಇಲ್ಲ, ಗಳಿಸಿದ್ದೆಲ್ಲ ಹೂಡಿಕೆ ಮಾಡಿ ಮೋಸ ಹೋದ ನಟಿ

ಕನ್ನಡ ತಮಿಳೂ ತೆಲುಗಿನಲ್ಲಿ ನಟಿಸಿರುವ ಖ್ಯಾತ ಸೌತ್ ನಟಿ ಸ್ನೇಹಾ. ಕನ್ನಡದ ರವಿಶಾಸ್ತ್ರೀ, ಕುರುಕ್ಷೇತ್ರ ಸಿನಿಮಾಗಳಲ್ಲೂ ನಟಿಸಿದ್ದಾಕೆ. ಸಿನಿಮಾಗಳಿಂದ ಬಂದ ಸಂಭಾವನೆಯನ್ನೆಲ್ಲಾ ಇವರು ಎಲ್ಲೋ ಹೂಡಿಕೆ ಮಾಡಿ ಮೋಸಹೋಗಿದ್ದಾರೆ.

ಕನ್ನಡ ತಮಿಳೂ ತೆಲುಗಿನಲ್ಲಿ ನಟಿಸಿರುವ ಖ್ಯಾತ ಸೌತ್ ನಟಿ ಸ್ನೇಹಾ. ಕನ್ನಡದ ರವಿಶಾಸ್ತ್ರೀ, ಕುರುಕ್ಷೇತ್ರ ಸಿನಿಮಾಗಳಲ್ಲೂ ನಟಿಸಿದ್ದಾಕೆ. ಸಿನಿಮಾಗಳಿಂದ ಬಂದ ಸಂಭಾವನೆಯನ್ನೆಲ್ಲಾ ಇವರು ಎಲ್ಲೋ ಹೂಡಿಕೆ ಮಾಡಿ ಮೋಸಹೋಗಿದ್ದಾರೆ. ಈವೆಂಟ್ ಗಳಿಂದ, ಸಿನಿಮಾಗಳಿಂದ ಜಾಹೀರಾತುಗಳಿಂದ ಬಂದ ಹಣವನ್ನೆಲ್ಲಾ ಹೂಡಿಕೆ ಮಾಡಿ ಪಂಗನಾಮ ಹಾಕಿಸಿಕೊಂಡಿದ್ದಾರೆ.  ವ್ಯಕ್ತಿಯೊಬ್ಬನ ನಂಬಿ ಹಣ ಹೂಡಿಕೆ ಮಾಡಿ ಈಗ ಅಸಲೂ ಇಲ್ಲ, ಲಾಭವೂ ಎನ್ನುವ ಪರಿಸ್ಥೀತಿ ಎದುರಾಗಿದೆಯಂತೆ.

Cheating, ಬೆದರಿಕೆ: ಚೆನ್ನೈನಲ್ಲಿ ದೂರು ದಾಖಲಿಸಿದ ನಟಿ ಸ್ನೇಹಾ

ಚೆನ್ನೈ ಪೋಲೀಸ್ ಠಾಣೆಗೆ ಕಂಪ್ಲೈಂಟ್ ನೀಡಿದ್ದಾರೆ.  ಇಬ್ಬರು ಉದ್ಯಮಿಗಳೂ  ಎಕ್ಸ್ಪೋರ್ಟ್ ಉದ್ಯಮವನ್ನು ಹೊಂದಿದ್ದರು. ಇವರನ್ನ ನಂಬಿ ಸ್ನೇಹಾ ಹಣ ಹೂಡಿಕೆ ಮಾಡಿದ್ದರಂತೆ. ಅವರು ಮೋಸ ಮಾಡಿದ್ದಾರಂತೆ. ಉದ್ಯಮಿಗಳ ವಿರುದ್ಧ ಕ್ರಮ ಕೈಗೊಳ್ಳೂವಂತೆ ದೂರಿನಲ್ಲಿ ತಿಳಿಸಿದ್ದಾರಂತೆ. ಹಣ ಕೊಡುವುದಿಲ್ಲ ಎಂದು ಹೇಳುವುದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದಾರಂತೆ.  ಪೋಲೀಸರು ತನಿಖೆ ಆರಂಭಿಸಿದ್ದಾರೆ.

Video Top Stories