Asianet Suvarna News Asianet Suvarna News

ಬರ್ತ್‌ಡೇ ದಿನ ಕನಸುಗಳ ಹಂಚಿಕೊಂಡ ನಟ ಸೋನು ಸೂದ್

Aug 1, 2021, 4:54 PM IST

ಕೊರೋನಾ ಸಮಯದಲ್ಲಿ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ನ್ಯಾಷನಲ್ ಹಿರೋ ಆಗಿರುವ ಸೋನು ಸೂದ್ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿದ್ದಾರೆ. ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಿರುವ ನಟ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.

ನೀವು ನನಗೆ ನನ್ನ ತಂದೆಯನ್ನು ನೆನಪಿಸಿದ್ರಿ: ಸೋನು ಬಗ್ಗೆ ಐಶ್ ಹೇಳಿದ್ದಿಷ್ಟು

ನನ್ನ ಕೆಲಸ ಯಾವುದೇ ಪ್ರದೇಶಕ್ಕೆ ಸೀಮಿತವಾಗಿಲ್ಲ. ಈ ಕೆಲಸ ಹೀಗೆ ಮುಂದುವರಿಯಲಿದೆ. ದೇಶದ ಎಲ್ಲ ಜನರಿಗೆ ಸಹಾಯ ಮಾಡಲು ನನ್ನಿಂದಾಗುವ ಕೆಲಸ ಮಾಡುತ್ತೇನೆ ಎಂದಿದ್ದಾರೆ ನಟ. ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಮಾಡಿದ ನಟ ವಿದ್ಯಾರ್ಥಿ ವೇತನ ಸೇರಿದಂತೆ ಬಹಳಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ.