Asianet Suvarna News Asianet Suvarna News

ಶಿವಣ್ಣನ 'ಓಂ'ಗೂ, ಶ್ರೀನಿಯ ಘೋಸ್ಟ್‌ಗಿದೆಯಾ ಲಿಂಕ್...?

ದೊಡ್ಡಮಟ್ಟದಲ್ಲಿಯೇ ಹೆಸರಾದ ಓಂ ಸಿನಿಮಾ ಈಗಲೂ ಬೇಡಿಕೆ ಉಳಿಸಿಕೊಂಡಿದೆ. ಈಗ  ಘೋಸ್ಟ್ ಸಿನಿಮಾದಲ್ಲಿ ಓಂ ಸಿನಿಮಾದ ಒಂದು ಸೀಕ್ವೆನ್ಸ್ ಇಡಲಾಗಿದ್ದು, ವಿಡಿಯೋ ತುಣುಕು ವೈರಲ್ ಆಗುತ್ತಿದೆ.
 

ಓಂ ಸಿನಿಮಾ ಕನ್ನಡ ಕಲ್ಟ್ ಸಿನಿಮಾ ಆಗಿದೆ. 1995 ರಲ್ಲಿ ಚಿತ್ರ ರಿಲೀಸ್ ಆಗಿದೆ.  28 ವರ್ಷಗಳ ಬಳಿಕ ಕನ್ನಡ ಓಂ ಸಿನಿಮಾ ಮತ್ತೊಮ್ಮೆ ರಿಲೀಸ್ ಆಗಿದೆ. ವೀರೇಶ್ ಸಿನಿಮಾಸ್‌ನಲ್ಲಿ ರಿಲೀಸ್ ಮಾಡಲಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಈ ಚಿತ್ರವನ್ನ ಅಂದು 70 ಲಕ್ಷ ವೆಚ್ಚದಲ್ಲಿ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ನಿರ್ಮಿಸಿದ್ದರು . ಈಗ  ಘೋಸ್ಟ್ ಸಿನಿಮಾದಲ್ಲಿ ಓಂ ಸಿನಿಮಾದ ಒಂದು ಸೀಕ್ವೆನ್ಸ್ ಇಟ್ಟಿದ್ದಾರೆ. ಘೋಸ್ಟ್ ಸಿನಿಮಾ ನಾಯಕ ನಟ ಓಂ ಸಿನಿಮಾ ನೋಡಲು ಬರುವ ಸೀನ್  ಎಂ.ಜಿ. ಶ್ರೀನಿವಾಸ್ ಒಂದು ಶಾಟ್ ಮಾಡಿದ್ದಾರೆ.. ಆ ಚಿತ್ರೀಕರಣದ ಸಣ್ಣದೊಂದು ವಿಡಿಯೋ ತುಣುಕು ವೈರಲ್ ಆಗುತ್ತಿದ್ದು, ಶಿವಣ್ಣ ಅಭಿಮಾನಿ ವೃಂದದಲ್ಲಿ ಸಂಚಲನ ಸೃಷ್ಟಿಸಿದೆ.ಎಂ.ಜಿ. ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರ `ಘೋಸ್ಟ್'ನಲ್ಲಿ ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದಾರೆ. ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಈ ಚಿತ್ರದಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ. 

Video Top Stories