ಲೂಸ್ ಮಾದ ಯೋಗಿಗಾಗಿ ಶಿವಣ್ಣನ ತ್ಯಾಗ.... "ರೋಸಿ" ಟೈಟಲ್ ಬಿಟ್ಟು ಕೊಟ್ಟ ಸೆಂಚುರಿ ಸ್ಟಾರ್..!

ಲೂಸ್ ಮಾದ ಯೋಗಿ 50ನೇ ಸಿನಿಮಾದ ಮುಹೂರ್ತವಾಗಿದ್ದು ಚಿತ್ರಕ್ಕೆ ರೋಸಿ ಎಂದು ಹೆಸರಿಡಲಾಗಿತ್ತು. ಆದರೆ ಈ ಟೈಟಲ್ ಸಮಸ್ಯೆ ಸೃಷ್ಟಿ  ಮಾಡಿತ್ತು.  ಶಿವಣ್ಣನಿಗೆ ಯೋಗಿ ಮನವಿ ಮಾಡಿಕೊಂಡಿದ್ದು,ರೋಸಿ ಟೈಟಲ್ ಬಿಟ್ಟುಕೊಟ್ಟಿದ್ದಾರೆ.

First Published Apr 22, 2023, 4:34 PM IST | Last Updated Apr 22, 2023, 4:34 PM IST

ಲೂಸ್ ಮಾದ ಯೋಗಿ 50ನೇ ಸಿನಿಮಾದ ಮುಹೂರ್ತವಾಗಿದ್ದು ಚಿತ್ರಕ್ಕೆ ರೋಸಿ ಎಂದು ಹೆಸರಿಡಲಾಗಿತ್ತು. ಆದರೆ ಈ ಟೈಟಲ್ ಸಮಸ್ಯೆ ಸೃಷ್ಟಿ  ಮಾಡಿದ್ದು,ಈಗಾಗಲೇ ಇದೇ ಹೆಸರಿನಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಘೋಷಣೆ ಮಾಡಿದ್ದಾರೆ.ಯೋಗಿಗೆ ರೋಸಿ ಸಿನಿಮಾ ಐವತ್ತನೇ ಚಿತ್ರವಾದರೆ, ಅರ್ಜುನ್ ಅವರಿಗೆ ಮೊದಲನೇ ಸಿನಿಮಾ. ಹಾಗಾಗಿ ಇಬ್ಬರು ಟೈಟಲ್‌ಗಾಗಿ ಕಿತ್ತಾಡುತ್ತಿದ್ದು ಶಿವರಾಜ್ ಕುಮಾರ್ ಮಧ್ಯ ಪ್ರವೇಶ ಮಾಡಿದ್ದಾರೆ. ಶಿವಣ್ಣನಿಗೆ ಯೋಗಿ ಮನವಿ ಮಾಡಿಕೊಂಡಿದ್ದಾರೆ. ಇದು ತಮ್ಮ ಐವತ್ತನೇ ಚಿತ್ರವಾಗಿದ್ದರಿಂದ ಟೀಮ್ ಜೊತೆ ಮಾತಾಡಿ ರೋಸಿ ಟೈಟಲ್ ಅನ್ನು ನಮಗೆ ಬಿಟ್ಟು ಕೊಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ  ಶಿವಣ್ಣ ರೋಸಿ ಟೈಟಲ್ ಬಿಟ್ಟುಕೊಟ್ಟಿದ್ದು ಆರಾಮಾಗಿ ಶೂಟಿಂಗ್ ಮಾಡಿ ನಮ್ಮ ತಂಡದ ಜೊತೆ ನಾನು ಮಾತನಾಡುತ್ತೇನೆ ರೋಸಿ ಟೈಟಲ್ ನಿಮ್ಮದೇ ಅಂತ ಹೇಳಿ ಕಳುಹಿಸಿದ್ದಾರೆ. ಹೀಗಾಗಿ ರೋಸಿ ಟೈಟಲ್ ವಿವಾದ ಈಗ  ಬಗೆ ಹರಿದೆ.