ಮೇ ತಿಂಗಳಲ್ಲಿ ರಣಗಲ್ ಸಿನಿಮಾ ಮಹೂರ್ತ...ಇರ್ತಾರಾ ಮಫ್ತಿ ಕಲಾವಿದರು..?

ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಮುಹೂರ್ತ ಪ್ಲಾನಿಂಗ್‌ ಶುರು ಆಗಿದೆ.  ಇದೇ ಮೇ ತಿಂಗಳಲ್ಲಿಯೇ ರಣಗಲ್ ಚಿತ್ರದ ಚಿತ್ರೀಕರಣ ಶುರು ಆಗುತ್ತಿದೆ.

First Published Apr 11, 2023, 4:38 PM IST | Last Updated Apr 11, 2023, 4:38 PM IST

ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಮುಹೂರ್ತ ಪ್ಲಾನಿಂಗ್‌ ಶುರು ಆಗಿದೆ.  ಸಿನಿಮಾದ ಬಹುತೇಕ ತಯಾರಿ ಆದಂತಿದೆ. ಹಾಗಾಗಿಯೇ ಈಗ ಸಿನಿಮಾ ಮುಹೂರ್ತದ ದಿನ ಕೂಡ ಫಿಕ್ಸ್ ಆಗುತ್ತಿದೆ. ಇದೇ ಮೇ ತಿಂಗಳಲ್ಲಿಯೇ ಭೈರತಿ ರಣಗಲ್ ಚಿತ್ರದ ಚಿತ್ರೀಕರಣ ಶುರು ಆಗುತ್ತಿದೆ.ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಭೈರತಿ ರಣಗಲ್ ಸಿನಿಮಾ ರಿಲೀಸ್ ಆಗುತ್ತದೆ. ಭೈರತಿ ರಣಗಲ್ ಚಿತ್ರದ ಕಲಾವಿದರ ಆಯ್ಕೆಯಲ್ಲಿಯೇ ಡೈರೆಕ್ಟರ್ ನರ್ತನ್ ಈಗ ತೊಡಗಿಕೊಂಡಿದ್ದಾರೆ. ಭೈರತಿ ರಣಗಲ್ ಚಿತ್ರಕ್ಕೂ ಮಫ್ತಿಗೂ ಒಂದು ಲಿಂಕ್ ಇದ್ದು,  ಪ್ರೀಕ್ವೆಲ್  ಎನ್ನಲಾಗಿದೆ.  ಭೈರತಿ ರಣಗಲ್ ನಲ್ಲಿ  ಮಫ್ತಿ ಚಿತ್ರದ ಕಲಾವಿದರಾದ ದೇವರಾಜ್, ಬಾಬು ಹಿರಣಯ್ಯ, ಮಧು ಗುರುಸ್ವಾಮಿ, ವಸಿಷ್ಠ ಸಿಂಹ  ಕಲಾವಿದರೂ ಇರುತ್ತಾರೆ ಎಂದು ಹೇಳಲಾಗಿದೆ.