Asianet Suvarna News Asianet Suvarna News

ಸಲ್ಲುಗೆ ತೆಲುಗು ಹೇಳಿಕೊಟ್ಟ ಸಾನ್ವಿ: ಕನ್ನಡ ಮರೆತ್ರಾ ಎಂದ ಫ್ಯಾನ್ಸ್...

ನಟಿ ರಶ್ಮಿಕಾ ಮಂದಣ್ಣ ಗುಡ್‌ ಬೈ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದು, ಬಿಗ್‌ ಬಾಸ್‌ ಸೀಸನ್‌ 16 ಗೆ ಸಿನಿಮಾ ಪ್ರಮೋಶನ್‌ಗಾಗಿ ತೆರಳಿದ್ದರು. ಈ ವೇಳೆ ನಟ ಸಲ್ಮಾನ್‌ ಖಾನ್‌ಗೆ ತೆಲುಗು ಡೈಲಾಗ್‌ ಹೇಳಿಕೊಟ್ಟಿದ್ದು, ಸಾನ್ವಿ ಕನ್ನಡವನ್ನೇ ಮರೆತುಬಿಟ್ರಾ ಎನ್ನುವಂತಾಗಿದೆ.

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಪ್ರಸಿದ್ಧಿ ಪಡೆದ ರಶ್ಮಿಕಾ ಮಂದಣ್ಣ, ನಂತರ ತೆಲುಗು ಸಿನಿಮಾಗಳ ಮೂಲಕ ತುಂಬಾ ಹೆಸರು ಮಾಡಿ ನ್ಯಾಷನಲ್ ಕ್ರಶ್ ಎಂದು ಅನಿಸಿಕೊಂಡಿದ್ದಾರೆ. ಇದರ ನಡುವೆ ರಶ್ಮಿಕಾಗೆ ಕನ್ನಡ ಭಾಷೆಗಿಂತ ಪರಭಾಷೆಗಳ ಮೇಲೆ ಹೆಚ್ಚಿನ ವ್ಯಾಮೋಹ ಅನ್ನುವ ಆರೋಪ ಇದೆ. ಅದಕ್ಕೆ ಪುಷ್ಟಿ ನೀಡುವಂತೆ ಸಾನ್ವಿ ನಡೆದುಕೊಂಡ ಉದಾಹರಣೆಗಳೂ ಇವೆ. ಇದೀಗ ಗುಡ್‌ ಬೈ ಸಿನಿಮಾ ಪ್ರಚಾರಕ್ಕಾಗಿ ನೀನಾ ಗುಪ್ತಾ ಜೊತೆ ಇತ್ತೀಚೆಗೆ ಬಿಗ್ ಬಾಸ್ ಶೋಗೆ ಭೇಟಿ ನೀಡಿದ್ದ ರಶ್ಮಿಕಾ, ಸಲ್ಮಾನ್‌ ಖಾನ್‌'ಗೆ ಹಿಂದಿ ಸಿನಿಮಾದ ಡೈಲಾಗ್‌ ಅನ್ನು ತೆಲುಗಿನಲ್ಲಿ ಹೇಳಿಕೊಟ್ಟಿದ್ದಾರೆ. ಇದರಿಂದ ಸಾನ್ವಿ ಫ್ಯಾನ್ಸ್ ಕೋಪಗೊಂಡಿದ್ದು, ಕನ್ನಡದಲ್ಲೇ ಡೈಲಾಗ್ ಹೇಳಿಕೊಡಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Video Top Stories