Asianet Suvarna News Asianet Suvarna News

ವಿಕ್ರಾಂತ್ ರೋಣನ 'ಗಡಂಗ್ ರಕ್ಕಮ್ಮ'ನ ಭರ್ಜರಿ ಎಂಟ್ರಿ; ಸ್ಯಾಂಡಲ್‌ವುಡ್‌‌ನಲ್ಲಿ ಶ್ರೀಲಂಕಾ ಬ್ಯೂಟಿಯ ಹವಾ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿರೋ ವಿಕ್ರಾಂತ್ ರೋಣ ಸಿನಿಮಾ ವರ್ಲ್ಡ್ ವೈಡ್ ಸೌಂಡ್ ಮಾಡುತ್ತಿದೆ. ಇದೀಗ ವಿಕ್ರಾಂತ್ ರೋಣನ ಹವಾ ಹೆಚ್ಚಿಸಲು ಗಡಂಗ್ ರಕ್ಕಮ್ಮನ ಎಂಟ್ರಿ ಆಗಿದೆ. ಬಾಲಿವುಡ್ ಮಿಂಚುಳ್ಳಿ ಜಾಕ್ವೆಲಿನ್ ಫರ್ನಾಂಡಿಸ್, ವಿಕ್ರಾಂತ್ ರೋಣನ ಜೊತೆ ಸೊಂಟ ಬಳುಕಿಸಿರೋ ಸ್ಪೆಷಲ್ ಸಾಂಗ್ ರಿಲೀಸ್ ಆಗಿದ್ದು. ಎಲ್ಲೆಲ್ಲೂ ಗಡಂಗ್ ರಕ್ಕಮ್ಮನ ಹಂಗಾಮ ಸೃಷ್ಟಿಯಾಗಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿರೋ ವಿಕ್ರಾಂತ್ ರೋಣ ಸಿನಿಮಾ ವರ್ಲ್ಡ್ ವೈಡ್ ಸೌಂಡ್ ಮಾಡುತ್ತಿದೆ. ಇದೀಗ ವಿಕ್ರಾಂತ್ ರೋಣನ ಹವಾ ಹೆಚ್ಚಿಸಲು ಗಡಂಗ್ ರಕ್ಕಮ್ಮನ ಎಂಟ್ರಿ ಆಗಿದೆ. ಬಾಲಿವುಡ್ ಮಿಂಚುಳ್ಳಿ ಜಾಕ್ವೆಲಿನ್ ಫರ್ನಾಂಡಿಸ್, ವಿಕ್ರಾಂತ್ ರೋಣನ ಜೊತೆ ಸೊಂಟ ಬಳುಕಿಸಿರೋ ಸ್ಪೆಷಲ್ ಸಾಂಗ್ ರಿಲೀಸ್ ಆಗಿದ್ದು. ಎಲ್ಲೆಲ್ಲೂ ಗಡಂಗ್ ರಕ್ಕಮ್ಮನ ಹಂಗಾಮ ಸೃಷ್ಟಿಯಾಗಿದೆ. ಗಡಂಗ್ ರಕ್ಕಮ್ಮನ ಸಾಂಗ್ ಕೇಳುತ್ತಿದ್ರೆ ಅಭಿಮಾನಿಗಳ ಮೈ ಮನವೆಲ್ಲಾ ಥ್ರಿಲ್ ಆಗಿದೆ. ಫ್ರೆಶ್ ಫೀಲ್ ಕೊಡೋ ಮ್ಯೂಸಿಕ್. ಡಾನ್ಸ್ ಮಾಡೋ ಹುಮ್ಮಸ್ಸು ಹೆಚ್ಚಿಸುತ್ತೆ. ಶ್ರೀಲಂಕಾ ಚೆಲುವೆ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಕಿಚ್ಚ ಸುದೀಪ್ ಹಾಡಿನ ವೈಭವಕ್ಕೆ ಕಿಕ್ ತುಂಬೋ ಸ್ಟೆಪ್ಸ್ ಹಾಕಿದ್ದಾರೆ.