Asianet Suvarna News Asianet Suvarna News

ಶೋಲೆ ರಿಲೀಸ್ ಆಗಿ 50 ವರ್ಷ: ಚಿತ್ರವನ್ನು ರಿಮೇಕ್ ಮಾಡುತ್ತಾರಾ ಸಲ್ಮಾನ್ ಖಾನ್!

ಅಮಿತಾಭ್ ಬಚ್ಚನ್ ನಟನೆಯ ‘ಶೋಲೆ’ ಸಿನಿಮಾ ರಿಲೀಸ್ ಆಗಿ 50 ವರ್ಷಗಳು ಕಳೆಯುತ್ತಾ ಬಂದಿವೆ. 1975ರ ಆಗಸ್ಟ್ 15ರಂದು ರಿಲೀಸ್ ಆದ ಈ ಚಿತ್ರ ಹಲವು ವರ್ಷ ಯಶಸ್ವಿ ಪ್ರದರ್ಶನ ಕಂಡಿತು. 

First Published Aug 24, 2024, 5:11 PM IST | Last Updated Aug 24, 2024, 5:42 PM IST

‘ಶೋಲೆ’ಯನ್ನು ರಿಮೇಕ್ ಮಾಡುತ್ತಾರಾ ಸಲ್ಮಾನ್ ಖಾನ್: ಬಾಲಿವುಡ್​​​ ದಿಗ್ಗಜರಾದ ಸಲಿಮ್ ಖಾನ್ ಹಾಗೂ ಜಾವೇದ್ ಅಖ್ತರ್ ಅವರ ಜೀವನ ಆಧರಿಸಿ ಡ್ಯಾಕ್ಯುಮೆಂಟರಿ ಸೀರಿಸ್ ರಿಲೀಸ್ ಮಾಡಲಾಗಿದೆ. ಇಬ್ಬರೂ ಸೇರಿ ‘ಶೋಲೆ’ ಸಿನಿಮಾಗೆ ಚಿತ್ರಕಥೆ ಬರೆದಿದ್ರು. ಈಗ ಈ ಸೋಲೆಯನ್ನ ಸಲ್ಮಾನ್ ಖಾನ್ ರಿಮೇಕ್ ಮಾಡಲು ಸಜ್ಜಾಗಿದ್ದಾರೆ. ಅಮಿತಾಭ್ ಬಚ್ಚನ್ ನಟನೆಯ ‘ಶೋಲೆ’ ಸಿನಿಮಾ ರಿಲೀಸ್ ಆಗಿ 50 ವರ್ಷಗಳು ಕಳೆಯುತ್ತಾ ಬಂದಿವೆ. 1975ರ ಆಗಸ್ಟ್ 15ರಂದು ರಿಲೀಸ್ ಆದ ಈ ಚಿತ್ರ ಹಲವು ವರ್ಷ ಯಶಸ್ವಿ ಪ್ರದರ್ಶನ ಕಂಡಿತು.

ಆಪರೇಷನ್ ಲಂಡನ್ ಕೆಫೆಯಲ್ಲಿ  ಮೇಘಾ ಶೆಟ್ಟಿ: ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಲಂಡನ್ ಕೆಫೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತಾ ಮೇಘ ಶೆಟ್ಟಿ ಏನು ಲಂಡನ್ ಗೆ ಹೋಗಿಲ್ಲ. ಅಪರೇಷನ್ ಲಂಡನ್ ಕೆಫೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಟಿ ಬೆಂಗಳೂರಿನಲ್ಲಿ ನಡೆದಿದ್ದು, ಸಿನಿಮಾದಲ್ಲಿ ಮೇಘಾ ಶೆಟ್ಟಿಗೆ ಜೋಡಿಯಾಗಿ ಕವೀಶ್ ಶೆಟ್ಟಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಿರ್ದೇಶಕ ಸಡಗರ ರಾಘವೇಂದ್ರ ಆಕ್ಷನ್ ಕಟ್ ಹೇಳಿದ್ದಾರೆ. ಐದು ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. 

ದೂರ ತೀರ ಯಾನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ: ಹರಿವು,  ನಾತಿಚರಾಮಿ, ಆಕ್ಟ್ 1978, ಸೇರಿದಂತೆ ಅದ್ಭುತ ಕಂಟೆಂಟ್ ಸಿನಿಮಾಗಳನ್ನ ಕೊಟ್ಟಿರೋ ಹೆಸರಾಂತ ನಿರ್ದೇಶಕ ಮನ್ಸೂರೆ ನಿರ್ದೇಶನದಲ್ಲಿ ದೂರ ತೀರ ಯಾನ ಅನ್ನೋ ಸಿನಿಮಾ ಮೂಡಿ ಬರುತ್ತಿದೆ.  ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಈ ಚಿತ್ರದ ನಾಯಕ - ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾವನ್ನ ದೇವರಾಜ್ ಆರ್ ನಿರ್ಮಾಣ ಮಾಡುತ್ತಿದ್ದಾರೆ. 

Video Top Stories