ಫೆಬ್ರವರಿಯಲ್ಲಿ ತೆರೆ ಕಾಣಲಿದೆ ಬಿಗ್ ಬಾಸ್ ರೂಪೇಶ್ ಶೆಟ್ಟಿಯ 'ಅಧಿಪತ್ರ'
ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅಭಿನಯದ 'ಅಧಿಪತ್ರ' ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ಕರಾವಳಿ ಭಾಗದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಆಟಿ ಕಳಂಜ, ಯಕ್ಷಗಾನ, ಹುಲಿ ಕುಣಿತ ಮುಂತಾದ ಆಚರಣೆಗಳನ್ನು ಒಳಗೊಂಡಿದೆ.
video name: ಬಿಗ್ ಬಾಸ್ ರೂಪೇಶ್ ಶೆಟ್ಟಿಯ 'ಅಧಿಪತ್ರ'
ಸ್ಯಾಂಡಲ್‌ವುಡ್‌ನ ಭರವಸೆ ನಟ ಬಿಗ್ಬಾಸ್ ಮೂಲಕ ಮನೆ ಮಾತಾದ ನಟ ರೂಪೇಶ್ ಶೆಟ್ಟಿ ಅಭಿನಯದ ಅಧಿಪತ್ರ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಫೆಬ್ರವರಿ ಅಧಿಪತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಅಧಿಪತ್ರದಲ್ಲಿ ಕರಾವಳಿ ಭಾಗದ ಕಥೆಯನ್ನು ಕಟ್ಟಿಕೊಡಲಾಗಿದೆ. ಕರಾವಳಿ ಭಾಗದ ವಿಶೇಷ ಆಚರಣೆಗಳಾದ ಆಟಿ ಕಳಂಜಾ, ಯಕ್ಷಗಾನ, ಹುಲಿ ಕುಣಿತ ಜೊತೆಗೆ ಅಧಿಪತ್ರ ಚಿತ್ರದಲ್ಲಿ ಹೊಸ ರೀತಿಯ ಕಥೆಯನ್ನೆ ಹೆಣೆದಿದ್ದಾರೆ ಚಯನ್ ಶೆಟ್ಟಿ.
ಬೆಂಗಳೂರು ಫಿಲಂ ಸಿಟಿಯಲ್ಲಿ "ವರ್ಣವೇದಂ" ಶೂಟಿಂಗ್!
"ನಾನು ಮತ್ತು ಗುಂಡ" ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಹೊಸ ಸಿನಿಮಾ "ವರ್ಣವೇದಂ". ಈ ಸಿನಿಮಾದ ಹಾಡಿನ ಚಿತ್ರೀಕರಣ ಕನಕಪುರ ರಸ್ತೆಯಲ್ಲಿ ಮಹಮ್ಮದ್ ಗೌಸ್ ಅವರು ನಿರ್ಮಿಸಿರುವ ಬೆಂಗಳೂರು ಫಿಲಂ ಸಿಟಿ ಎಂಬ ನೂತನ ಸ್ಟುಡಿಯೋದಲ್ಲಿ ನಡೆದಿದೆ. ಈ ಸಿನಿಮಾವನ್ನ ಚಂದ್ರಶೇಖರ್, ವಿಶ್ವನಾಥ್, ಶೈಜು ಹಾಗೂ ರಾಜೇಶ್ ನಿರ್ಮಾಣ ಮಾಡುತ್ತಿದ್ದಾರೆ. ನಾಯಕ ನೈಋತ್ಯ ಹಾಗೂ ನಾಯಕಿ ಪ್ರತೀಕ್ಷ ಸಿನಿಮಾದಲ್ಲಿದ್ದಾರೆ.
ಪಾಕಶಾಲಾ" ಪ್ರವೀಣರಿಂದ "ಪಾಠಶಾಲಾ" ಟೀಸರ್ ಅನಾವರಣ..!
ಕೆಲವು ವರ್ಷಗಳ ಹಿಂದೆ "ಗ್ಯಾಪಲ್ಲೊಂದು ಸಿನಿಮಾ" ಮಾಡಿ ನಂತರ "ಓಮಿನಿ" ಎಂಬ ಚಿತ್ರ ನಿರ್ದೇಶಿಸಿರುವ ಹೆದ್ದೂರ್ ಮಂಜುನಾಥ್ ಶೆಟ್ಟಿ ಈಗ "ಪಾಠಶಾಲಾ" ಎಂಬ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿಹಿಕಹಿ ಚಂದ್ರು ಹಾಗೂ ಸಿಹಿಕಹಿ ಗೀತಾ ದಂಪತಿ ಟೀಸರ್ ಅನಾವರಣ ಮಾಡಿ "ಪಾಠಶಾಲಾ" ತಂಡಕ್ಕೆ ಶುಭ ಕೋರಿದ್ದಾರೆ. ನಲವತ್ತಕ್ಕೂ ಆಧಿಕ ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ನಟನ ಪ್ರಶಾಂತ್ ಚಿತ್ರದಲ್ಲಿದ್ದಾರೆ. 80, 90 ರ ಕಾಲಘಟ್ಟದಲ್ಲಿ ಶಿಕ್ಷಕರು ಮಕ್ಕಳ ನಡುವೆ ಇದ್ದ ಸಂಬಂಧದ ಸುತ್ತಲ್ಲಿನ ಕಥಾಹಂದರ ಈ ಚಿತ್ರದಲ್ಲಿದೆ.