ರಾಕಿ ಬಾಯ್ ಮನೆ ಬಾಗಿಲು ತಟ್ಟಿದ ರಾಜಕೀಯ ಪಕ್ಷಗಳು..!
ಸ್ಟಾರ್ ಪ್ರಚಾರಕನಾಗಿ ಯಶ್ ಪ್ರಚಾರ ಮಾಡಿತ್ತಿಲ್ಲ, ರಾಕಿ ಬಾಯ್ ರಾಜಕೀಯಕ್ಕೆ ಬರುತ್ತಿಲ್ಲ ಎನ್ನಲಾಗಿದೆ.
ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.ಮತದಾರರನ್ನು ಸೆಳೆಯಲು ಎಲ್ಲ ರೀತಿಯ ತಯಾರಿಗಳು ನಡೆಯುತ್ತಿದೆ. ಸ್ಟಾರ್ ಪ್ರಚಾರಕರನ್ನು ಕರೆತರುವತ್ತ ಪಕ್ಷಗಳ ಚಿತ್ತವಿದೆ. ಬಿಜೆಪಿ ಮುಖಂಡರು ಈಗಾಗಲೇ ಸುದೀಪ್ ಅವರನ್ನು ಕರೆತಂದಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರ ಪರ ಕಿಚ್ಚ ಪ್ರಚಾರ ಮಾಡಲಿದ್ದಾರೆ. ಹಾಗೇ ಈ ಸಾಲಿಗೆ ಯಶ್ ಸೇರುತ್ತಾರಾ ಎನ್ನುವ ಅನುಮಾನ ಇದಿದ್ದು ಇದಕ್ಕೆ ಉತ್ತರ ಸಿಕ್ಕಿದೆ. ಈ ಬಾರಿ ಯಶ್ ರಾಜಕೀಯಕ್ಕೆ ಬರುತ್ತಿಲ್ಲ ಎನ್ನಲಾಗಿದೆ.ಯಶ್ ಅವರನ್ನು ಅನೇಕ ರಾಜಕಾರಣಿಗಳು ಭೇಟಿ ಮಾಡಿದ್ದಾರೆ. ಆದರೆ, ಯಾವ ಪಕ್ಷದ ಪರವೂ ಯಶ್ ಪ್ರಚಾರ ಮಾಡುತ್ತಿಲ್ಲ.