ಪ್ಯಾನ್ ಇಂಡಿಯಾ ಸ್ಟಾರ್ ಆದ ಶೆಟ್ರು ಗ್ಯಾಂಗ್: ಬಾಲಿವುಡ್'ನಲ್ಲಿ ಮಂಕಾದ ರಶ್ಮಿಕಾ-ದೇವರಕೊಂಡ

ಕಿರಿಕ್ ಬೆಡಗಿ ರಶ್ಮಿಕಾ,  ರಕ್ಷಿತ್ ಶೆಟ್ಟಿಯಿಂದ ದೂರವಾಗಿ ಟಾಲಿವುಡ್'ಗೆ ಹಾರಿದ ಬಳಿಕ ಹಿಂದೆ ತಿರುಗಿ ನೋಡಲೇ ಇಲ್ಲ. ಗೆಲುವಿನ ಹೂಮಾಲೆ ಕೊರಳಿಗೆ ಬಿದ್ದು ನ್ಯಾಷನಲ್ ಕ್ರಶ್ ಪಟ್ಟಕ್ಕೇರಿದ್ದರು. ಆದರೆ ಬಾಲಿವುಡ್'ನಲ್ಲಿ ರಶ್ಮಿಕಾ ಸೋಲಿನ ಸುಳಿಯಲ್ಲಿ ಬಿದ್ದಿದ್ದು, ಕಾಕತಾಳೀಯ ಎಂಬಂತೆ ಶೆಟ್ರು ಗ್ಯಾಂಗ್ ಗೆಲುವು ಸಾಧಿಸುತ್ತಿದೆ.

First Published Oct 19, 2022, 12:32 PM IST | Last Updated Oct 19, 2022, 12:32 PM IST

ರಶ್ಮಿಕಾ ಮಂದಣ್ಣ ಬಾಲಿವುಡ್ ಎಂಟ್ರಿ ಆಗಿದ್ದೇ ತಡ, ಇನ್ಮುಂದೆ ಅವರು ಯಾರ ಕೈಗೂ ಸಿಗೋಲ್ಲ ಅನ್ನುವ ಟಾಕ್ ಶುರುವಾಗಿತ್ತು. ಆದ್ರೆ ರಶ್ಮಿಕಾ ಸೋಲಿನ ಸುಳಿಯಲ್ಲಿ ಒದ್ದಾಡುತ್ತಿದ್ದು, ರಶ್ಮಿಕಾ ಹಾಗೂ ಅಮಿತಾಭ್ ಬಚ್ಚನ್ ನಟಿಸಿದ ಗುಡ್ ಬೈ ಸಿನಿಮಾಗೆ ಕಾಂತಾರ ಬಂದ ಬಳಿಕ ಸಿನಿ ಪ್ರೇಕ್ಷಕರು ಗುಡ್ ಬೈ ಹೇಳಿದ್ದಾರೆ. ಹಾಗೂ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿಯ 777 ಚಾರ್ಲಿ ಮುಂದೆಯು ಮಂಕಾಗಿದ್ದು, ಚಾರ್ಲಿ ಸಿನಿಮಾ ಬಿಡುಗಡೆ ದಿನವೇ ತೆರೆಕಾಣಬೇಕಿದ್ದ ರಶ್ಮಿಕಾರ ಹಿಂದಿಯ ಮಿಷನ್ ಮಜ್ನು ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಇತ್ತ ವಿಜಯ್ ದೇವಕೊಂಡ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್'ಗೆ ಕೂಡ ಸೋಲಿನ ರುಚಿ ಸಿಕ್ಕಿದೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ