Asianet Suvarna News Asianet Suvarna News

Rashmika Mandanna: ತನ್ನನ್ನು ಲಾಂಚ್ ಮಾಡಿದ ನಿರ್ಮಾಣ ಸಂಸ್ಥೆಯನ್ನೆ ಮರೆತು ಬಿಟ್ರಾ ರಶ್ಮಿಕಾ?

ಹತ್ತಿ ಬಂದ ಎಣಿಯನ್ನೆ ಒದ್ದು ಬಿಟ್ಟರಾ ರಶ್ಮಿಕಾ! ತನ್ನನ್ನು ಲಾಂಚ್ ಮಾಡಿದ ಪ್ರೊಡಕ್ಷನ್ ಹೌಸ್ ಬಗ್ಗೆ ಹೇಳೋಕೆ ರಶ್ಮಿಕಾಗೆ ಹಿಂಜರಿಕೆಯೆ? ಕೃತಜ್ಞತೆ ಇಲ್ಲದ ಜನರೇಷನ್ ಎಂದು ಟ್ರೋಲ್ ಆಗುತ್ತಿರೋದಾದ್ರೂ ಯಾಕೆ? ರಶ್ಮಿಕಾ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ.

First Published Oct 27, 2022, 10:59 PM IST | Last Updated Oct 27, 2022, 10:59 PM IST

ಹತ್ತಿ ಬಂದ ಎಣಿಯನ್ನೆ ಒದ್ದು ಬಿಟ್ಟರಾ ರಶ್ಮಿಕಾ! ತನ್ನನ್ನು ಲಾಂಚ್ ಮಾಡಿದ ಪ್ರೊಡಕ್ಷನ್ ಹೌಸ್ ಬಗ್ಗೆ ಹೇಳೋಕೆ ರಶ್ಮಿಕಾಗೆ ಹಿಂಜರಿಕೆಯೆ? ಕೃತಜ್ಞತೆ ಇಲ್ಲದ ಜನರೇಷನ್ ಎಂದು ಟ್ರೋಲ್ ಆಗುತ್ತಿರೋದಾದ್ರೂ ಯಾಕೆ? ರಶ್ಮಿಕಾ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ. ಅವರಿಗೆ ಅವಕಾಶ ಕೊಟ್ಟಿದ್ದು ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ. ಆದರೆ ಇದನ್ನು ಸ್ವತಃ ರಶ್ಮಿಕಾ ಅವರೇ ಮರೆತು ಬಿಟ್ಟಿದ್ದಾರಾ? ಅನ್ನೋ ಅನುಮಾನ ಶುರುವಾಗಿದೆ. ಅದಕ್ಕೆ ಕಾರಣವಾಗಿದ್ದು ರಶ್ಮಿಕಾ ಇತ್ತೀಚೆಗಿನ ಸಂದರ್ಶನ. ಕಿರಿಕ್ ಪಾರ್ಟಿ ರಶ್ಮಿಕಾಗೆ ಮೊದಲ ಹೆಜ್ಜೆ ಎನ್ನುವುದು ಕನ್ನಡಿಗರಿಗೆಲ್ಲ ಗೊತ್ತು. ಆದರೆ ಹೊರಗಿನ ಚಿತ್ರರಂಗದಲ್ಲಿ ರಶ್ಮಿಕಾ ಅವರ ಮೊದಲ ಸಿನಿಮಾ ಬಗ್ಗೆ, ಲಾಂಚ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.  ಬಹಳಷ್ಟು ಜನರು ಅವರನ್ನು ತೆಲುಗು ಚಿತ್ರಗಳಿಂದಲೇ ಎಂದು ತಿಳಿದುಕೊಂಡಿದ್ದಾರೆ. ಆದರೆ ರಶ್ಮಿಕಾ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ. 

ಅವರಿಗೆ ಅವಕಾಶ ಕೊಟ್ಟಿದ್ದು ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ  ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ. ಆದರೆ ಇದನ್ನು ಸ್ವತಃ ರಶ್ಮಿಕಾ ಅವರೇ ಮರೆತು ಬಿಟ್ಟಿದ್ದಾರಾ? ಹೌದು ಎನ್ನುವಂತಹ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಕರ್ಲಿ ಟೇಲ್ಸ್ ಎನ್ನುವುದು ಫೇಮಸ್ ಶೋ. ಸೋಷಿಯಲ್ ಮೀಡಿಯಾದಲ್ಲಿಯೇ ಹೆಚ್ಚು ವೀಕ್ಷಕರಿರುವ ಒಂದು ಸೆಲೆಬ್ರಿಟಿ ಶೋ. ಇದರಲ್ಲಿ ಕಿಚ್ಚ ಸುದೀಪ್ ಕೂಡಾ ಭಾಗವಹಿಸಿದ್ದರು. ಈಗ ನಟಿ ರಶ್ಮಿಕಾ ಅವರೂ ಭಾಗವಹಿಸಿದ್ದಾರೆ. ಈ ಸಂದರ್ಶನದ ತುಣುಕೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿರೂಪಕಿ ರಶ್ಮಿಕಾ ಅವರಲ್ಲಿ ಅವರ ಸಿನಿಮಾ ಎಂಟ್ರಿ, ಆ ಜರ್ನಿ ಹೇಗೆ ಶುರುವಾಯಿತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರಶ್ಮಿಕಾ ಫ್ರೆಶ್ ಫೇಸ್ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಇದರಲ್ಲಿ ಭಾಗವಹಿಸಲು ನನಗೆ ಮನಸಿರಲಿಲ್ಲ. ಶಿಕ್ಷಕರು ಹೇಳಿದ ಕಾರಣ ಸ್ಪರ್ಧಿಸಿದ್ದೆ. ನಂತರ ಇದರಲ್ಲಿ ವಿಜೇತೆಯಾಗಿ ಹೊರಹೊಮ್ಮಿದೆ.  ನಂತರ ನನ್ನ ಫೋಟೊ ಹಾಗೂ ಟೈಟಲ್ ಪೇಪರ್‌ನಲ್ಲಿ ಪ್ರಕಟಿಸಲಾಯಿತು. ಆಗ ಪ್ರೊಡಕ್ಷನ್ ಹೌಸ್‌ನಿಂದ ಕಾಲ್ ಬಂತು ಎಂದಿದ್ದಾರೆ ‌. ಈ ಸಂದರ್ಭ ರಶ್ಮಿಕಾ ವ್ಯಂಗ್ಯವಾಗಿ ಎರಡು ಕೈಯನ್ನು ಎತ್ತಿ ವ್ಯಂಗ್ಯ ಸಿಂಬಲ್ ಕೊಟ್ಟಿದ್ದು ಈಗ ನೆಟ್ಟಿಗರು ನಟಿಯನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories