Asianet Suvarna News Asianet Suvarna News

ಕಿರಿಕ್ ಪಾರ್ಟಿ ಚಿತ್ರಕ್ಕೆ ರಶ್ಮಿಕಾ ಸಂಭಾವನೆ 5 ಲಕ್ಷ: ಈಗ ರಶ್ಮಿಕಾಗೆ ಮಾಡುತ್ತಿದ್ದಾರೆ 5 ಕೋಟಿ ಡಿಮ್ಯಾಂಡ್!

ಕಿರಿಕ್ ಸುಂದ್ರಿ ಯಾವ್ದೇ ಸಿನಿಮಾ ಮಾಡ್ಲಿ ನನ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆಯಪ್ಪಾ ಅಂತ ಆ ಪಾತ್ರಕ್ಕಾಗಿ ಪೇಮೆಂಟ್ ಪಡೆಯಲು ಭಾರಿ ಡಿಮ್ಯಾಂಡ್ ಮಾಡ್ತಾರಂತೆ. ಯಾವ್ ಮಟ್ಟಕ್ಕೆ ಅಂದ್ರೆ ಲಿಲ್ಲಿ ಬಗ್ಗೆ ಇತ್ತೀಚೆಗೊಂದು ಸುದ್ದಿ ಬಂದಿದೆ. ಶ್ರೀವಲ್ಲಿ ನಾಲ್ಕು ನಿಮಿಷದ ಐಟಂ ಸಾಂಗ್ ಒಂದಕ್ಕೆ ಸೊಂಟ ಬಳಕಿಸಲು ಬರೋಬ್ಬರಿ 5 ಕೋಟಿ ಕೇಳಿದ್ದಾರಂತೆ. 

ಕೊಡಗಿನ ಕುವರಿ 26ರ ಹರೆಯದ ಹುಡುಗಿ ರಶ್ಮಿಕಾ ಮಂದಣ್ಣ ಅಂದ್ರೆ ಅದೇನೋ ಒಂದ್ ರೀತಿ ನ್ಯಾಷನಲ್ ಕ್ರೇಜ್. ತಳುಕು ಬಳುಕಿನ ಮೈಮಾಟ, ಮೋಹದಲ್ಲಿ ಕೆಡವಿಬಿಡೋ ಕಣ್ಣೋಟ, ಕ್ಯೂಟ್ ಕ್ಯೂಟ್ ಎಕ್ಸ್ಪ್ರೆಷನ್ ಕೊಡೋ ಈಕೆಯ ಮುನ್ನೋಟ ನೋಡಿ ಅಬ್ಬಬ್ಬ..! ಏನ್ ಚಂದಾನೋ ನಮ್ ಹುಡುಗಿ ಅನ್ನೋ ಅದೆಷ್ಟೋ ಪಡ್ಡೆ ಹೈದರಿದ್ದಾರೆ. ಅಷ್ಟೆ ಅಲ್ಲ ಮತ್ತೊಂದ್ ಕಡೆ ಲಿಲ್ಲಿಯನ್ನ ಲೀಲಾಜಾಲವಾಗಿ ಟ್ರೋಲ್ ಮಾಡೋ ಡೈ ಹಾರ್ಡ್ ಟ್ರೋಲರ್ಸ್ ಕೂಡ ಇವ್ರನ್ನ ಫಾಲೋ ಮಾಡ್ತಾರೆ. ಒಟ್ಟಿನಲ್ಲಿ ಈಗ ದೇಶಾದ್ಯಂತ ಸಾನ್ವಿಯದ್ದೇ ದರ್ಬಾರ್ ನಡೀತಿದೆ. ಹೀಗಾಗಿ ಇದನ್ನರಿತಿರೋ ಈ ಕಿರಿಕ್ ಸುಂದ್ರಿ ಯಾವ್ದೇ ಸಿನಿಮಾ ಮಾಡ್ಲಿ ನನ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆಯಪ್ಪಾ ಅಂತ ಆ ಪಾತ್ರಕ್ಕಾಗಿ ಪೇಮೆಂಟ್ ಪಡೆಯಲು ಭಾರಿ ಡಿಮ್ಯಾಂಡ್ ಮಾಡ್ತಾರಂತೆ. 

ಯಾವ್ ಮಟ್ಟಕ್ಕೆ ಅಂದ್ರೆ ಲಿಲ್ಲಿ ಬಗ್ಗೆ ಇತ್ತೀಚೆಗೊಂದು ಸುದ್ದಿ ಬಂದಿದೆ. ಶ್ರೀವಲ್ಲಿ ನಾಲ್ಕು ನಿಮಿಷದ ಐಟಂ ಸಾಂಗ್ ಒಂದಕ್ಕೆ ಸೊಂಟ ಬಳಕಿಸಲು ಬರೋಬ್ಬರಿ 5 ಕೋಟಿ ಕೇಳಿದ್ದಾರಂತೆ. ಅದು ಆರು ವರ್ಷದ ಹಿಂದಿನ ಕಥೆ. ಜೆಸ್ಟ್ ಆ್ಯಕ್ಟಿಂಗ್ ಟ್ರೈ ಮಾಡೋಣ ಅಂತ ಕಿರಿಕ್ ಪಾರ್ಟಿ ಸಿನಿಮಾ ತಂಡ ಕರೆದಿದ್ದ ಆಡಿಷನ್ಗೆ ಹೋಗಿದ್ರು ರಶ್ಮಿಕಾ ಮಂದಣ್ಣ. ಅಲ್ಲಿ ರಕ್ಷಿತ್ ರಿಷಬ್ ಎದುರು ತನ್ನ ಮೋಹದ ನಗು ಚೆಲ್ಲಿದ್ದ ರಶ್ಮಿಕಾ ನೆಕ್ಟ್ಸ್ ಡೇನೆ ಕಿರಿಕ್ ಪಾರ್ಟಿಯ ಸಾನ್ವಿ ಅನ್ನೋ ಕನ್ನಡಕದ ಟೀಚರಮ್ಮ ಆದ್ರು. ಈ ಟೀಚರ್‌ನ ನೋಡಿ ಕರ್ನಾಟಕದ ಹುಡುಗ್ರು ತನ್ನ ಹಾರ್ಟ್‌ ಕ್ರಶ್ ಮಾಡಿಬಿಟ್ರು. ಒಂದೇ ಒಂದು ಕಿರಿಕ್ ಪಾರ್ಟಿ ಸಿನಿಮಾ ರಶ್ಮಿಕಾಗೆ ಎಲ್ಲಾ ಭಾಷೆಯ ಬಿಗ್ ಸಿನಿಮಾಗಳ ಡೋರ್ ಓಪನ್ ಮಾಡ್ತು. ಆದ್ರೆ ರಶ್ಮಿಕಾ ತನ್ನ ಮೊದಲ ಚಿತ್ರಕ್ಕೆ ಪಡೆದಿದ್ದು ಬರೀ 5 ಲಕ್ಷ ರೂಪಾಯಿ ಸಂಭಾವನೆ. 

ಅದೇ ರಶ್ಮಿಕಾ ಇಂದು ನಾಲ್ಕು ನಿಮಿಷದ ಹಾಡಿನಲ್ಲಿ ಕುಣಿಬೇಕು ಅಂದ್ರೆ ನೀವು ಕೊಡಬೇಕು ಐದು ಕೋಟಿ ರೂಪಾಯಿ. ರಶ್ಮಿಕಾ ಮಂದಣ್ಣ ಬರೀ ಆರೇ ವರ್ಷಕ್ಕೆ 16 ಸಿನಿಮಾ ಮಾಡಿದ್ದಾರೆ. ಆಲ್ ಮೋಸ್ಟ್ ಸಿನಿಮಾಗಳು ಹಿಟ್ ಆಗಿವೆ. ಬಿಗ್ ಸ್ಟಾರ್ಸ್ ಸಿನಿಮಾಗಳಿಗೆ ಇವರೇ ಫಸ್ಟ್ ಸೆಲೆಕ್ಟ್ ಆಗ್ತಿದ್ದಾರೆ. ಇದೀಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟಿಸುತ್ತಿರೋ ಸಿನಿಮಾ ಒಂದರಲ್ಲಿ ಕ್ಯಾಬರೇ ಹಾಡಿಗೆ ಮಸ್ತ್ ಆಗಿ ಕುಣಿಯೋಕೆ ರಶ್ಮಿಕಾಗೆ ಆಫರ್ ಮಾಡಿದ್ದಾರಂತೆ. ಆದ್ರೆ ಲಿಲ್ಲಿ ಮಾತ್ರ ನನಗೆ 5 ಕೋಟಿ ಪೇಮೆಂಟ್ ಕೊಡಿ ಬಂದು ಡಾನ್ಸ್ ಮಾಡಿ ಹೋಗ್ತೇನೆ ಎಂದು ಡಿಮ್ಯಾಂಡ್ ಮಾಡಿದ್ದಾರಂತೆ. ಎನಿ ವೇ ಈಗ ರಶ್ಮಿಕಾ ಜಮಾನ ನಡೆಯುತ್ತಿರೋದದಂತು ನಿಜ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories