ಮಾಯಾವಿ ಕ್ರೈಂಗೆ ಥ್ರಿಲ್ ಆದ್ರು ಪ್ರೇಕ್ಷಕರು,ಶಿವಾಜಿ ಸೂರತ್ಕಲ್‌ಗೆ ಸಿಕ್ತು ಬೆಸ್ಟ್ ರಿವ್ಯೂ

ಸ್ಯಾಂಡಲ್‌ವುಡ್‌  ಸುಂದರಾಂಗ ಜಾಣ ರಮೇಶ್ ಅರವಿಂದ್ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಶಿವಾಜಿ ಸೂರತ್ಕಲ್ ಪಾರ್ಟ್2 ಸಿನಿಮಾದ ಕ್ರೈಂ ಕಥೆಯನ್ನ ನೋಡಿ ಪ್ರೇಕ್ಷಕರು ಭೇಷ್ ಎಂದಿದ್ದಾರೆ.

First Published Apr 16, 2023, 5:07 PM IST | Last Updated Apr 16, 2023, 5:07 PM IST

ಸ್ಯಾಂಡಲ್‌ವುಡ್‌  ಸುಂದರಾಂಗ ಜಾಣ ರಮೇಶ್ ಅರವಿಂದ್ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಈ ಭಾರಿ ರಮೇಶ್ ಅರವಿಂದ್ ಸರಣಿ ಕೊಲೆಗಳ ಭೇದಿಸಿದ್ದಾರೆ. ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಪಾರ್ಟ್2 ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದ ಕ್ರೈಂ ಕಥೆಯನ್ನ ನೋಡಿ ಪ್ರೇಕ್ಷಕರು ಭೇಷ್ ಎಂದಿದ್ದಾರೆ.. ಶಿವಾಜಿ ಸೂರತ್ಕಲ್‌ನಲ್ಲಿ ರಣಗಿರಿ ರಹಸ್ಯ ಭೇದಿಸಿ ಮೆಚ್ಚುಗೆ ಪಡೆದಿದ್ದ ರಮೇಶ್ ಅರವಿಂದ್ ಈ ಭಾರಿ ದಿ ಕೇಸ್ ಆಫ್ ಮಾಯಾವಿಯ ಸರಣಿ ಹಂತಕನನ್ನ ಹಿಡಿದು ಗೆದ್ದಿದ್ದಾರೆ. ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸೂರತ್ಕಲ್ ಪಾರ್ಟ್2 ಸಿನಿಮಾ ಕೂಡ ಸಕ್ಸಸ್ ಟ್ರ್ಯಾಕ್‌ಗೆ ಬಂದಿದ್ದು, ಕ್ಷಣ ಕ್ಷಣಕ್ಕು ಟ್ವಿಸ್ಟ್‌, ರೋಚಕ ಮಾಯಾವಿಯ ಥ್ರಿಲ್ಲಿಂಗ್ ಅನುಭವದಲ್ಲಿ ಪ್ರೇಕ್ಷಕರು ಮಿಂದೇಳುತ್ತಿದ್ದಾರೆ.