ಅಜಯ್‌ ದೇವಗನ್‌ ಸಿನಿಮಾಗೆ ರಕ್ಷಿತ್‌ ಶೆಟ್ಟಿ ಸಾಥ್‌..!

ಅಜಯ್‌ ದೇವಗನ್‌ ನಟಿಸಿರುವ ಭೋಲಾ ಸಿನಿಮಾ ರಿಲೀಸ್‌ ಬೆನ್ನಲ್ಲೇ  ಮೈದಾನ್‌ ಸಿನಿಮಾ ಟೀಸರ್‌ ಸಿನಿರಸಿಕರಲ್ಲಿ ಹುಚ್ಚೆಬ್ಬಿಸಿದ್ದು, ನಟ ರಕ್ಷಿತ್ ಶೆಟ್ಟಿ ಟೀಸರ್ ನೋಡಿ ಮೆಚ್ಚಿಕೊಂಡಿದ್ದು, ಟೀಸರ್ ಶೇರ್ ಮಾಡಿ  ತಂಡಕ್ಕೆ ಶುಭ ಹಾರೈಸಿದ್ದಾರೆ.

First Published Apr 4, 2023, 4:38 PM IST | Last Updated Apr 4, 2023, 4:42 PM IST

ಅಜಯ್‌ ದೇವಗನ್‌ ನಟಿಸಿರುವ ಭೋಲಾ ಸಿನಿಮಾ ರಿಲೀಸ್‌ ಬೆನ್ನಲ್ಲೇ  ಮೈದಾನ್‌ ಸಿನಿಮಾ ಟೀಸರ್‌ ಸಿನಿರಸಿಕರಲ್ಲಿ ಹುಚ್ಚೆಬ್ಬಿಸಿದೆ. ಭಾರತೀಯ ಫುಟ್ಬಾಲ್‌ನ 'ಸುವರ್ಣ ಯುಗ'ದ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗುತ್ತಿದ್ದು, 60ರ ದಶಕದ ಭಾರತ ಫುಟ್‌ಬಾಲ್ ತಂಡದ ಕೋಚ್ ಸೈಯದ್ ಅಬ್ದುಲ್ ರಹೀಂ ಹೋರಾಟದ ಕಥೆಯನ್ನು ಈ  ಸಿನಿಮಾ ಆಧರಿಸಿದೆ. ಇದೀಗ ರಿಲೀಸ್ ಡೇಟ್ ಸಮೇತ ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಜೂನ್ 23ಕ್ಕೆ ಸಿನಿಮಾ ತೆರೆಮೇಲೆ ಬರಲಿದೆ.ನಟ ರಕ್ಷಿತ್ ಶೆಟ್ಟಿ ಟೀಸರ್ ನೋಡಿ ಮೆಚ್ಚಿಕೊಂಡಿದ್ದು, ಟೀಸರ್ ಶೇರ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಹಿಂದೆನೆ  ತೆರೆಗೆ ಬರಬೇಕಾಗಿದ್ದ ಮೈದಾನ್‌ ಸಿನಿಮಾ ಕಾರಣಾಂತರಗಳಿಂದ ಬರೋದು ತಡವಾಗಿದ್ದು, ಅಮಿತ್ ಶರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಪ್ರಿಯಾಮಣಿ, ಗಜ್‌ರಾಜ್‌ ರಾವ್, ರುದ್ರಾನಿಲ್ ಘೋಷ್ ಕೂಡ ಚಿತ್ರದಲ್ಲಿದ್ದಾರೆ.