ಬೆಳ್ಳಿತೆರೆಗೆ ಕನಸಿನ ರಾಣಿ ಮಗಳು ಎಂಟ್ರಿ: 'ಕೆಡಿ' ಧ್ರುವ ಸರ್ಜಾಗೆ ನಾಯಕಿಯಾಗಿ ರಾಧನಾ ರಾಮ್?
ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್‌ನಲ್ಲಿ ಕೆ.ಡಿ ಸಿನಿಮಾ ಶುರುವಾಗಿದ್ದು, ಇದೀಗ ಚಿತ್ರದ ನಾಯಕಿ ಯಾರು ಎಂಬುದು ಗೊತ್ತಾಗಿದೆ.
ಕೆ.ಡಿ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದು, ಚಿತ್ರದ ನಾಯಕಿ ಯಾರಾಗ್ತಾರೆ ಅನ್ನುವ ಕುತೂಹಲ ಬೆಟ್ಟದಷ್ಟಿತ್ತು. ಇದೀಗ ಚಿತ್ರದಲ್ಲಿ ಧ್ರುವಗೆ ನಾಯಕಿ ಸಿಕ್ಕಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ. ಅವರೇ ಕನಸಿನ ರಾಣಿ ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಅವರ ಮುದ್ದಿನ ಮಗಳು ರಾಧನಾ ರಾಮ್. ಇದೀಗ ರಾಧನಾ ಬೆಳ್ಳಿತೆರೆ ಮೇಲೆ ಮಿಂಚೋಕೆ ರೆಡಿಯಾಗಿದ್ದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಪ್ಯಾನ್ ಇಂಡಿಯಾ ಸಿನಿಮಾ ಕೆಡಿಗೆ ನಾಯಕಿ ಆಗಿ ಸೆಲೆಕ್ಟ್ ಆಗುತ್ತಿದ್ದಾರೆ ಎಂದು ಗಾಂಧಿನಗರದಲ್ಲಿ ಗುಲ್ಲೆದ್ದಿದೆ. ಸಧ್ಯದಲ್ಲೇ ನಿರ್ದೇಶಕ ಪ್ರೇಮ್ ಈ ಗುಟ್ಟನ್ನು ರಿವೀಲ್ ಮಾಡಲಿದ್ದಾರೆ. 1980ರ ದಶಕದ ಸ್ಟೋರಿ ಇದಾಗಿದ್ದು, ಸಿನಿಮಾದಲ್ಲಿ ಸಂಜಯ್ ದತ್ ಸೇರಿದಂತೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಸ್ ಅಭಿನಯಿಸುತ್ತಿದ್ದಾರೆ. ಈಗಾಗ್ಲೆ ರಿಲೀಸ್ ಆಗಿರೋ ಕೆಡಿ ಟೈಟಲ್ ಟೀಸರ್ 28 ಮಿಲಿಯನ್ಸ್ ವೀವ್ಸ್ ಕಂಡಿದೆ.