ಆರ್‌ಆರ್‌ಆರ್ ನಿರ್ಮಾಪಕ ಎಲ್ಲೂ ಕಾಣಿಸ್ತಿಲ್ಲ ಯಾಕೆ?: ಚಿತ್ರತಂಡದ ಜೊತೆ ನಿಲ್ಲದ ದಾನಯ್ಯ?

ಇತ್ತೀಚೆಗೆ ನಡೆದ ಆಸ್ಕರ್‌ 2023 ಅಲ್ಲಿ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಈ ವರ್ಷ ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದಿದ್ದು, ಸದ್ಯ ಆರ್‌ಆರ್‌ಆರ್ ತಂಡ ಆಸ್ಕರ್‌ ಗೆದ್ದ ಖುಷಿಯನ್ನು ಸಂಭ್ರಮಿಸುತ್ತಿದೆ.

First Published Mar 16, 2023, 10:42 PM IST | Last Updated Mar 16, 2023, 10:42 PM IST

ಇತ್ತೀಚೆಗೆ ನಡೆದ ಆಸ್ಕರ್‌ 2023 ಅಲ್ಲಿ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಈ ವರ್ಷ ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದಿದ್ದು, ಸದ್ಯ ಆರ್‌ಆರ್‌ಆರ್ ತಂಡ ಆಸ್ಕರ್‌ ಗೆದ್ದ ಖುಷಿಯನ್ನು ಸಂಭ್ರಮಿಸುತ್ತಿದೆ. ಆದರೆ ನಿರ್ಮಾಪಕ ಡಿವಿವಿ ದಾನಯ್ಯ ಮಾತ್ರ ಈ ಸಂತಸದ ಭಾಗವಾಗದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇಡೀ ವಿಶ್ವವೇ ಇಷ್ಟೊಂದು ಬಿಗ್ ಬಜೆಟ್ ಸಿನಿಮಾವನ್ನು ಕುತೂಹಲದಿಂದ ನೋಡುತ್ತಿರುವ ಹೊತ್ತಿನಲ್ಲಿ ಡಿವಿವಿ ದಾನಯ್ಯ ಮಾತ್ರ ಎಲ್ಲೂ ತಂಡದ ಜೊತೆ ಕಾಣಿಸಿಕೊಂಡಿಲ್ಲ. ಈ ಸಮಾರಂಭದಲ್ಲಿ ರಾಜಮೌಳಿ ಅವರ ಕುಟುಂಬ, ಚಿತ್ರತಂಡ ಮತ್ತು ನಾಯಕರು ಭಾಗವಹಿಸಿದ್ದರು. ಆದರೆ ದಾನಯ್ಯ ಮಾತ್ರ ದೂರ ಉಳಿದಿದ್ದಾರೆ. ಅಸಲಿಗೆ ಏನಾಯ್ತು. ದಾನಯ್ಯ ಯಾಕೆ ದೂರವಾದರು ಅನ್ನೋದು ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.