ಕನ್ನಡದ ಈ ಚೆಲುವೆ ಪವನ್ ಕಲ್ಯಾಣ್​ ಸಿನಿಮಾಕ್ಕೆ ನಾಯಕಿ...

 ನಟಿ ಪ್ರಿಯಾಂಕಾ ಅರುಲ್ ಮೋಹನ್ ಪವನ್ ಕಲ್ಯಾಣ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.ತೆಲುಗು, ತಮಿಳಿನ ಕೆಲವು ಸಿನಿಮಾಗಳಲ್ಲಿ ನಟಿಸಿ ಇದೀಗ ಪವನ್ ಕಲ್ಯಾಣ್​ರ ಸಿನಿಮಾ ಒಂದಕ್ಕೆ  ನಾಯಕಿಯಾಗಿದ್ದಾರೆ. 

First Published Apr 23, 2023, 4:50 PM IST | Last Updated Apr 23, 2023, 4:50 PM IST

ಕನ್ನಡ ಚಿತ್ರರಂಗದಿಂದ  ಪರಭಾಷೆಗಳಲ್ಲಿ ಮಿಂಚುತ್ತಿರುವ ನಟಿಯರ ಸಂಖ್ಯೆ ದೊಡ್ಡದಿದೆ. ರಶ್ಮಿಕಾ ಮಂದಣ್ಣ ,ಶ್ರೀಲೀಲಾ ಸೇರಿ ಇನ್ನೂ ಹಲವು ಕರ್ನಾಟಕ ಮೂಲದ ನಟಿಯರುಸಿನಿಮಾ ರಂಗಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇದೇ ಪಟ್ಟಿಗೆ ಇಗಾ ನಟಿ ಪ್ರಿಯಾಂಕಾ ಅರುಲ್ ಮೋಹನ್ ಸೇರಿದ್ದಾರೆ . 2019 ರಲ್ಲಿ ಬಿಡುಗಡೆ ಆದ ‘ಒಂದ್ ಕತೆ ಹೇಳ್ಲಾ’ ಸಿನಿಮಾದ ಮೂಲಕ ನಟನೆ ಆರಂಭಿಸಿದ ಬೆಂಗಳೂರಿನ ಈ ನಟಿ ಈಗ ಪವನ್ ಕಲ್ಯಾಣ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.ತೆಲುಗು, ತಮಿಳಿನ ಕೆಲವು ಸಿನಿಮಾಗಳಲ್ಲಿ ನಟಿಸಿ ಇದೀಗ ಪವನ್ ಕಲ್ಯಾಣ್​ರ ಸಿನಿಮಾ ಒಂದಕ್ಕೆ  ನಾಯಕಿಯಾಗಿದ್ದಾರೆ. ಪ್ರಭಾಸ್ ನಟನೆಯ ಸಾಹೊ ಅದಕ್ಕೂ ಮುನ್ನ ರನ್ ರಾಜ ರನ್ ಸಿನಿಮಾಗಳನ್ನು ನಿರ್ದೇಶಿಸಿರುವ ಸುಜಿತ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.