Asianet Suvarna News Asianet Suvarna News

ರಾಧೆಶ್ಯಾಮ್ ರಿಲೀಸ್ ಡೇಟ್ ಫಿಕ್ಸ್: ತೆರೆಯ ಮೇಲೆ ಮತ್ತೆ ಪ್ರಭಾಸ್ ಅಬ್ಬರ

Aug 1, 2021, 4:33 PM IST

ನಟ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ದೇಶಾದ್ಯಂತ ಸಿಕ್ಕಾಪಟ್ಟೆ ಹವಾ ಹೆಚ್ಚಿಸಿರೋ ರೊಮ್ಯಾಂಟಿಕ್ ಸಿನಿಮಾದ ಫಸ್ಟ್ ಲುಕ್ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಫಸ್ಟ್‌ ಲುಕ್ ಮತ್ತು ಟೀಸರ್ ಮೂಲಕ ಗಮನ ಸೆಳೆದ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು.

ಹೆಸರಿನ ಜೊತೆಗಿದ್ದ ಗಂಡನ ಹೆಸರು ತೆಗೆದ ಸಮಂತಾ: ಕ್ಯೂಟ್ ಜೋಡಿ ಮಧ್ಯೆ ಏನಾಯ್ತು ?

ಆದರೆ ಕೊರೋನಾದಿಂದ ಅಡೆತಡೆಗಳು ಬರುತ್ತಲೇ ಇತ್ತು. ಈಗ ಹೊಸ ವಷಧಕ್ಕೆ ಸಿನಿಮಾ ತೆರೆಯ ಮೇಲೆ ಬರಲಿದೆ. ಇತ್ತೀಚೆಗೆ ಶೂಟಿಂಗ್ ಮುಗಿದಿದ್ದು, ಸಂಕ್ರಾಂತಿಗೆ ವಿಶ್ವಾದ್ಯಂತ ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ನಾಲ್ಕಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆಗೆ ಬರಲಿದೆ.