1000 ಕೋಟಿ ಕ್ಲಬ್ ಸೇರಿದ ಪ್ರಭಾಸ್ 'ಕಲ್ಕಿ': ಚಿತ್ರತಂಡದಿಂದ ಬೈ 1 ಗೆಟ್ 1 ಟಿಕೆಟ್ ಫ್ರೀ ಆಫರ್!

ಕಲ್ಕಿ ಬಾಕ್ಸಾಫೀಸ್​ನಲ್ಲಿ ಹೊಸ ಭಾಷ್ಯ ಬರೆದಿದೆ. ಅದು ಸಾವಿರ ಕೋಟಿ ಕಲೆಕ್ಷನ್ ರೆಕಾರ್ಡ್. ಕಲ್ಕಿ ಸಿನಿಮಾ ರಿಲೀಸ್ ಆಗಿ 20 ದಿನ ಆಗಿದೆ. ಈ ಶಾರ್ಟ್​​ ಟೈಂನಲ್ಲೇ ಕಲ್ಕಿ ಸಾವಿರ ಕೋಟಿ ಕ್ಲಬ್ ಸೇರಿದೆ. 
 

First Published Jul 18, 2024, 12:32 PM IST | Last Updated Jul 18, 2024, 1:30 PM IST

ಕಲ್ಕಿ.. ಸದ್ಯ ಇಂಡಿಯಾ ಟು ಫಾರಿನ್ ವರೆಗೂ ಕೇಳಿ ಬರ್ತಿರೋ ಒಂದೇ ಹೆಸ್ರು. ಟಾಲಿವುಡ್ ಡಾರ್ಲಿಂಗ್ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾ ತೆರೆ ಮೇಲೆ ರುದ್ರತಾಂಡವವಾಡ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ’ಕಲ್ಕಿ 2898 AD ಸಿನಿಮಾದಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್‌ರಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಎರಡು ಭಾಗಗಳಾಗಿ ಬರೋ ಕಲ್ಕಿಯ ಮೊದಲ ಪಾರ್ಟ್ ಬಂದಿದೆ. ಇದೀಗ ಕಲ್ಕಿ ಬಾಕ್ಸಾಫೀಸ್​ನಲ್ಲಿ ಹೊಸ ಭಾಷ್ಯ ಬರೆದಿದೆ. ಅದು ಸಾವಿರ ಕೋಟಿ ಕಲೆಕ್ಷನ್ ರೆಕಾರ್ಡ್. ಕಲ್ಕಿ ಸಿನಿಮಾ ರಿಲೀಸ್ ಆಗಿ 20 ದಿನ ಆಗಿದೆ. ಈ ಶಾರ್ಟ್​​ ಟೈಂನಲ್ಲೇ ಕಲ್ಕಿ ಸಾವಿರ ಕೋಟಿ ಕ್ಲಬ್ ಸೇರಿದೆ. 'ಕಲ್ಕಿ 2898 AD' ಚಿತ್ರ ನೋಡುವ ಪ್ರೇಕ್ಷಕರಿಗೆ ಒಂದು ಬಂಫರ್ ಆಫರ್ ಸಿಕ್ಕಿದೆ. ಅದೇನು ಅಂದ್ರೆ ಮಹಿಳೆಯರು ಹಾಗೂ ಕುಟುಂಬ ಸದಸ್ಯರು ಚಿತ್ರದ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಫ್ರೀ ಎಂದು ಘೋಷಿಸಲಾಗಿದೆ. 

ಆದರೆ ಇದು ಭಾರತ ದೇಶದಲ್ಲಿ ಅಲ್ಲ. ಅಮೆರಿಕಾದ ಲಾಸ್ ಎಂಜೆಲ್ಸ್‌ನ ಬಿಗ್ಗೆಸ್ಟ್ ಐಮ್ಯಾಕ್ಸ್ ಸ್ಕ್ರೀನ್ ಟೀಸೀಎಲ್ ಚೈನೀಸ್ ಥಿಯೇಟರ್‌ನಲ್ಲಿ ಮಾತ್ರ ಈ ಆಫರ್ ಇದೆ. ಇದನ್ನು ನೋಡಿ ಭಾರತದಲ್ಲೂ ಈ ಆಫರ್ ಕೊಟ್ಟಿದ್ದರೆ ಚೆನ್ನಾಗಿತ್ತು ಎಂದು ಕೇಳುತ್ತಿದ್ದಾರೆ. ಪ್ರಭಾಸ್​​​ಗೆ ಕಲ್ಕಿ ಸಿನಿಮಾ ಮತ್ತೆ ಜೀವಕಳೆ ತಂದಿದೆ. ಸಲಾರ್​ನಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದ ಪ್ರಭಾಸ್​ ಕಲ್ಕಿಯಲ್ಲಿ ಆನೆಯನ್ನೇ ಹೊಡೆದಿದ್ದಾರೆ. ಆದ್ರೆ ಈ 'ಕಲ್ಕಿ 2898 AD' ಚಿತ್ರಕ್ಕೂ ಮುನ್ನ ಭಾರತದಲ್ಲಿ 6 ಸಿನಿಮಾಗಳು 1000 ಕೋಟಿ ರೂ. ಕ್ಲಬ್ ಸೇರಿದ್ದವು. ಬಾಲಿವುಡ್ ಕಿಂಗ್ ಖಾನ್ ಶಾರುಖ್​ ನಟನೆಯ ಪಠಾಣ್ ಸಿನಿಮಾ 1050 ಕೋಟಿ ಗಳಿಸಿದ್ರೆ, ಜವಾನ್ ಸಿನಿಮಾ 1,148 ಕಲೆಕ್ಷನ್ ಮಾಡಿತ್ತು.  ನ್ಯಾಷನಲ್ ಸ್ಟಾರ್​ ಯಶ್ ಕೂಡ ಸಾವಿರ ಕೋಟಿಯ ಸರದಾರನೇ. 

ಯಶ್ ನಟನೆಯ ಕೆಜಿಎಫ್​​ ಎರಡನೇ ಅಧ್ಯಾಯ ಒಟ್ಟು 1250 ಕೋಟಿ ಗಳಿಸಿ ಇತಿಹಾಸ ಬರೆದಿದೆ. ಆದ್ರೆ ಕೆಜಿಎಫ್​​ನ ಈ ರೆಕಾರ್ಡ್ ಬ್ರೇಕ್ ಮಾಡಿದ್ದು ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾ. ಈ ಸಿನಿಮಾದ ಒಟ್ಟು ಕಲೆಕ್ಷನ್ 1387 ಕೋಟಿ. ಇನ್ನು ಬಾಹುಬಲಿ ಬಗ್ಗೆ ಹೇಳದೇ ಇದ್ರೆ ಹೇಗೆ. ಪ್ರಭಾಸ್​ ನ ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ್ದೇ ಬಾಹುಬಲಿ ಸಿನಿಮಾ. ಈ ಸಿನಿಮಾದ ಎರಡನೇ ಭಾಗ ಬಾಹುಬಲಿ ದಿ ಕನ್‌ಕ್ಲೂಷನ್ ವಿಶ್ವದಾದ್ಯಂತ 1,810 ಕೋಟಿ ರೂ. ಗಳಿಕೆ ಕಂಡ ಮೊದಲ ಸೌತ್ ಇಂಡಿಯಾ ಸಿನಿಮಾ ಅನ್ನೋ ಹೆಗ್ಗಳಿಕೆ ಪಡೆದಿದೆ. ಆದ್ರೆ ಈ ಸಿನಿಮಾದ ರೆಕಾರ್ಡ್​​​ಅನ್ನೂ ಬ್ರೇಕ್ ಮಾಡಿದ ಕೀರ್ತಿ ಅಮೀರ್​ ಖಾನ್​​ಗಿದೆ. ಅಮೀರ್​ ನಟನೆಯ ದಂಗಲ್ ಸಿನಿಮಾ 2,024 ಕೋಟಿ ರೂ. ಗಳಿಸಿದೆ. ಭಾರತದಲ್ಲಿ ಅತಿ ಹೆಚ್ಚು ಗಳಿಸಿರೋ ಸಿನಿಮಾ ಲೀಸ್ಟ್​ನಲ್ಲಿ ಸಧ್ಯ ಟಾಪ್​​ನಲ್ಲಿರೋದು ದಂಗಲ್. ಆದ್ರೆ ಈಗ ಕಲ್ಕಿ ಸಿನಿಮಾದ ಸಕ್ಸಸ್​ಫುಲ್ ಓಟ ನೋಡುತ್ತಿದ್ರೆ. ಪ್ರಭಾಸ್​ ತನ್ನ ಹಳೇಯ ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡಿದ್ರು ಆಶ್ಚರ್ಯ ಇಲ್ಲ.

Video Top Stories