ಸಿಲ್ವರ್ ಜುಬಿಲಿ ಸಂಭ್ರಮದಲ್ಲಿ ಪ್ಯಾನ್ ಇಂಡಿಯಾ ‘ಕಬ್ಜ’, 25 ದಿನ ಯಶಸ್ವಿ ಪ್ರದರ್ಶನ
ಉಪೇಂದ್ರ ಅಭಿನಯದ, ಸುದೀಪ್ ಮತ್ತು ಶಿವರಾಜ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಬ್ಜ ಸಿನಿಮಾ ಬಿಡುಗಡೆಯಾಗಿ 25 ದಿನ ಪೂರೈಸಿದೆ.
ಉಪೇಂದ್ರ ಅಭಿನಯದ, ಸುದೀಪ್ ಮತ್ತು ಶಿವರಾಜ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಬ್ಜ ಸಿನಿಮಾ ಬಿಡುಗಡೆಯಾಗಿ 25 ದಿನ ಪೂರೈಸಿದ್ದು, ಆರ್ ಚಂದ್ರು ನಿರ್ದೇಶಕ ತಮ್ಮ ಇಡೀ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀಯಾ ಶರಣ್ ನಾಯಕಿಯಾಗಿ ನಟಿಸಿದ್ದರು. ‘ಕಬ್ಜ ಸಿನಿಮಾಗೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ದಾಖಲೆಯ ಕಲೆಕ್ಷನ್ ಗಳಿಸಿದೆ. ಉಪೇಂದ್ರ ಅವರಿಗೆ ಋಣಿಯಾಗಿದ್ದೇನೆ ಮತ್ತು ಈ ಕ್ರೆಡಿಟ್ ಇಡೀ ತಂಡಕ್ಕೆ ಸಲ್ಲಬೇಕು ಎಂದು ಚಂದ್ರು ಹೇಳಿದ್ದಾರೆ.ಇದೀಗ ಕಬ್ಜ 2 ಬಗ್ಗೆ ನಿರ್ದೇಶಕರಾದ ಆರ್. ಚಂದ್ರು ಅವರು ಅಧಿಕೃತ ಘೋಷಣೆ ಹೊರಡಿಸಿದ್ದು, ಕಬ್ಜ ಸೀಕ್ವೆಲ್ ಅವರು ಮಾಹಿತಿ ನೀಡಿದ್ದಾರೆ.