Asianet Suvarna News Asianet Suvarna News

ಕುಡಿದು ನಟಿ ಜೊತೆ ನಂದಮೂರಿ ಬಾಲಕೃಷ್ಣ ದುರ್ವತನೆ?: ಸೆನ್ಸೇಷನಲ್ ವಿಡಿಯೋ ವೈರಲ್!

ಬಾಲಕೃಷ್ಣ ತೆಲುಗು ಚಿತ್ರರಂಗದ ಪ್ರಮುಖ ಮಾಸ್ ಹೀರೋ. ವಯಸ್ಸು 63ರಲ್ಲೂ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಬಾಲಕೃಷ್ಣ ಆಗಾಗ ನಾನಾ ವಿವಾದಗಳಲ್ಲಿ ಸಿಲುಕುತ್ತಿರುತ್ತಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ವಿಶ್ವಕ್ ಸೇನ್ ನಟನೆಯ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾದ ಇವೆಂಟ್ ಇತ್ತು. 
 

ಬಾಲಕೃಷ್ಣ ತೆಲುಗು ಚಿತ್ರರಂಗದ ಪ್ರಮುಖ ಮಾಸ್ ಹೀರೋ. ವಯಸ್ಸು 63ರಲ್ಲೂ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಬಾಲಕೃಷ್ಣ ಆಗಾಗ ನಾನಾ ವಿವಾದಗಳಲ್ಲಿ ಸಿಲುಕುತ್ತಿರುತ್ತಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ವಿಶ್ವಕ್ ಸೇನ್ ನಟನೆಯ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾದ ಇವೆಂಟ್ ಇತ್ತು. ಅದಕ್ಕೆ ಮುಖ್ಯ ಅತಿಥಿಯಾಗಿ ನಂದಮೂರಿ ಬಾಲಕೃಷ್ಣ ಆಗಮಿಸಿದ್ದರು. 'ರಣವಿಕ್ರಮ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಅಂಜಲಿ ಕೂಡ 'ಗ್ಯಾಂಗ್ಸ್ ಆಫ್ ಗೋದಾವರಿ' ಸಿನಿಮಾದಲ್ಲಿ ನಟಿಸಿದ್ದು, ಅವರು ಕೂಡ ವೇದಿಕೆ ಮೇಲೆ ಇದ್ದರು. ಈ ವೇಳೆ ದಿಢೀರನೇ ಅಂಜಲಿಯನ್ನು ಬಾಲಯ್ಯ ತಳ್ಳಿದರು. ಒಂದು ಕ್ಷಣ ಅಂಜಲಿ ದಿಗ್ಬ್ರಾಂತಿಗೆ ಒಳಗಾಗಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಪಕ್ಕದಲ್ಲೇ ಇದ್ದ ನಟಿ ನೇಹಾ ಶೆಟ್ಟಿ, ಅಂಜಲಿಯನ್ನು ಹಿಡಿದುಕೊಂಡರು. ನಂತರ ಸಾವರಿಸಿಕೊಂಡು ಬಾಲಯ್ಯರನ್ನು ನೋಡಿ ನಕ್ಕರು ಅಂಜಲಿ, ನಂತರ ಅವರ ಜೊತಗೆ ಮಾತುಕತೆಯಲ್ಲಿ ತಲ್ಲೀನರಾದರು. ಬಾಲಯ್ಯ ತಮಾಷೆಗಾಗಿ ಹೀಗೆ ಮಾಡಿದರೂ, ವಿಡಿಯೋ ನೋಡಿದವರಿಗೆ ಇದು ತಮಾಷೆ ಎನಿಸುವಂತೆ ಇರಲಿಲ್ಲ. ಇದೀಗ ಈ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.