ನಟ ಅಜಿತ್ ಕುಮಾರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?: ಹೊಸ ಸೇರ್ಪಡೆಯಾದ ಕಾರಿನ ಬೆಲೆ ಎಷ್ಟು ಗೊತ್ತಾ?
ಕಾಲಿವುಡ್ ನಟ ಅಜಿತ್ ಕುಮಾರ್ ಹೊಸ ಪೋರ್ಷೆ 911 GT3 RS ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ ಎಂದು ಅವರ ಪತ್ನಿ ಶಾಲಿನಿ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಕಾರಿನ ಬೆಲೆ ಏನು ಮತ್ತು ಯಾವ ವೈಶಿಷ್ಟ್ಯಗಳನ್ನು ಹೊಂದಿದೆ ಇಲ್ಲಿದೆ ಮಾಹಿತಿ.
ಕಾಲಿವುಡ್ ನಟ ಅಜಿತ್ ಕುಮಾರ್ ಹೊಸ ಪೋರ್ಷೆ 911 GT3 RS ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ ಎಂದು ಅವರ ಪತ್ನಿ ಶಾಲಿನಿ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಕಾರಿನ ಬೆಲೆ ಏನು ಮತ್ತು ಯಾವ ವೈಶಿಷ್ಟ್ಯಗಳನ್ನು ಹೊಂದಿದೆ ಇಲ್ಲಿದೆ ಮಾಹಿತಿ. ಅಜಿತ್ ಕುಮಾರ್ ತಂದಿರುವ ಪೋರ್ಷೆ 911 GT3 RS ಕಾರು ಭಾರತದಲ್ಲಿ ಸುಮಾರು 4.39 ಕೋಟಿ ರೂಪಾಯಿ ಮೌಲ್ಯದಾಗಿದೆ. ಅಜಿತ್ ಕುಮಾರ್ ಅವರಿಗೆ ಸ್ಪೋರ್ಟ್ಸ್ ಕಾರುಗಳ ಮೇಲೆ ವಿಶೇಷ ಪ್ರೀತಿ ಇದ್ದು, ಇದಕ್ಕೂ ಮುನ್ನ ಒಂಬತ್ತು ಕೋಟಿ ಮೌಲ್ಯದ ಫೆರಾರಿ ಕಾರನ್ನು ಖರೀದಿಸಿದ್ದರು. ಕಾರು ಪ್ರಿಯರಾದ ಇವರು ತಮ್ಮ ಮನೆಯಲ್ಲಿ ಹಲವಾರು ಐಷಾರಾಮಿ ಕಾರುಗಳನ್ನು ಖರೀದಿಸಿ ಇಟ್ಟುಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದರು ಅಜಿತ್. ಕೆಂಪು ಬಣ್ಣದ ಆ ಕಾರಿನ ಬೆಲೆ ರೂ. 9 ಕೋಟಿ. ಅದನ್ನು ದುಬೈನಲ್ಲಿ ಇಟ್ಟಿದ್ದಾರೆ ಅಜಿತ್. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.