ವಿಎಫ್ಎಕ್ಸ್ ಎಂದವರಿಗೆ ಪ್ರೆಸ್‌ಮೀಟ್‌ನಲ್ಲೇ ಸಿಕ್ಸ್ ಪ್ಯಾಕನ್ನ ಪ್ರದರ್ಶಿಸಿದ ಸಲ್ಮಾನ್ ಖಾನ್!
ಬಾಲಿವುಡ್ ನಟ ಸಲ್ಮಾನ್ ಖಾನ್ ಸದ್ಯ ಕಿಸಿ ಕ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ಸಲ್ಮಾನ್ ಅನೇಕ ಕಡೆ ತೆರಳಿ ಸಿನಿಮಾದ ಪ್ರಚಾರ ಮಾಡುತ್ತಿದ್ದು, ಏಪ್ರಿಲ್ 21ರಂದು ತೆರೆಗೆ ಬರಲಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಸದ್ಯ ಕಿಸಿ ಕ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ಸಲ್ಮಾನ್ ಅನೇಕ ಕಡೆ ತೆರಳಿ ಸಿನಿಮಾದ ಪ್ರಚಾರ ಮಾಡುತ್ತಿದ್ದು, ಏಪ್ರಿಲ್ 21ರಂದು ತೆರೆಗೆ ಬರಲಿದೆ. ಅದಕ್ಕೂ ಮೊದಲು ಸಿನಿಮಾ ತಂಡ ಟ್ರೇಲರ್ ರಿಲೀಸ್ ಮಾಡಿದೆ. ಇದರಲ್ಲಿ ಸಲ್ಲು ಸಿಕ್ಸ್ ಪ್ಯಾಕ್ನಲ್ಲಿ ಮಿಂಚಿದ್ದಾರೆ. ಕೆಲವರು ಇದನ್ನು ವಿಎಫ್ಎಕ್ಸ್ ಎಂದು ಕರೆದಿದ್ದಾರೆ. ಅವರಿಗೆ ಸಲ್ಲು ವೇದಿಕೆ ಮೇಲೆ ಉತ್ತರ ನೀಡಿದ್ದಾರೆ. ಸಲ್ಮಾನ್ ಖಾನ್ ವರ್ಕೌಟ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ವಯಸ್ಸು 57 ದಾಟಿದರೂ ಫಿಟ್ ಅಂಡ್ ಫೈನ್ ಆಗಿದ್ದಾರೆ. ಪ್ರತಿ ದಿನ ಅವರು ಜಿಮ್ನಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಾರೆ. ಈ ಕಾರಣಕ್ಕೆ ಅವರು ಬಾಡಿಯನ್ನು ಉತ್ತಮವಾಗಿ ಕಾಯ್ದುಕೊಂಡಿದ್ದಾರೆ. ಆದರೆ, ಕೆಲವರಿಗೆ ಸಲ್ಮಾನ್ ಖಾನ್ ಸಿಕ್ಸ್ ಪ್ಯಾಕ್ ಬಗ್ಗೆ ಅನುಮಾನ ಮೂಡಿದೆ. ವೇದಿಕೆ ಮೇಲೆ ಈ ಅನುಮಾನವನ್ನು ಸಲ್ಮಾನ್ ಖಾನ್ ಬಗೆಹರಿಸಿದ್ದಾರೆ.