ಹೃತಿಕ್ ರೋಷನ್ OR ಜೂ.ಎನ್‌ಟಿಆರ್: ಇಬ್ಬರಲ್ಲಿ ಯಾರಿಗೆ ಕ್ವೀನ್ ಆಗ್ತಾರೆ ಕಿಯಾರಾ?

ಹತಿಕ್ ರೋಷನ್ ಮತ್ತು ಜೂ.ಎನ್ ಟಿ ಆರ್ ನಟನೆಯ ವಾರ್ 2 ಸಿನಿಮಾಗೆ ಕಿಯಾರಾ ಅಡ್ವಾಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಯಾರಿಗೆ ಕ್ವೀನ್ ಆಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 

First Published Jun 23, 2023, 4:24 PM IST | Last Updated Jun 23, 2023, 4:24 PM IST

ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮತ್ತು ಜೂ.ಎನ್ ಟಿ ಆರ್ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಈ ಬಗ್ಗೆ ಹೃತಿಕ್ ರೋಷನ್ ಕೂಡ ಸುಳಿವು ನೀಡಿದ್ದರು. ಇಬ್ಬರೂ ವಾರ್-2 ಸಿನಿಮಾದಲ್ಲಿ ಒಟ್ಟಿಗೆ ನಟಿಸಲಿದ್ದಾರೆ ಎನ್ನಲಾಗಿದೆ. ವಾರ್ 2 ಸಿನಿಮಾಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಆಯ್ಕೆಯಾಗಿದ್ದಾರೆ. ಇಬ್ರಲ್ಲಿ ಕಿಯಾರಾ ಯಾರಿಗೆ ನಾಯಕಿ ಎನ್ನುವ ಪ್ರಶ್ನೆ ಎದುರಾಗಿದೆ. ಹೃತಿಕ್ ಅಥವಾ ಜೂ.ಎನ್ ಟಿ ಆರ್ ಇಬ್ಬರಲ್ಲಿ ಯಾರಿಗೆ ನಾಯಕಿಯಾಗಿ ಕಿಯಾರಾ ನಟಿಸುತ್ತಾರೆ ಎನ್ನುವ ಚರ್ಚೆ ನಡೆಯುತ್ತಿದೆ.