Asianet Suvarna News Asianet Suvarna News

ತನ್ನ ಸಿನಿಮಾಗಳ ಪೋಸ್ಟರ್ ಶೇರ್ ಮಾಡಿದ ಪ್ರಶಾಂತ್ ನೀಲ್‌ಗೆ ಅಭಿಮಾನಿಗಳ ಪ್ರಶ್ನೆ

ಪ್ರಶಾಂತ್ ನೀಲ್ ನಿರ್ದೇಶನದ ಮೂರು ಸಿನಿಮಾಗಳ ಪೋಸ್ಟರ್‌ ಒಂದೇ ಶೇಡ್, ಒಂದೇ ಸ್ಟೈಲ್‌ನಲ್ಲಿ ಕಾಣುತ್ತಿವೆ. ಪ್ರಶಾಂತ್ ನೀಲ್ ಇತ್ತೀಚಿಗಷ್ಟೆ ಪೋಸ್ಟರ್ ಶೇರ್ ಮಾಡಿದ್ದರು. ಒಂದೇ ಶೇಡ್ ನಲ್ಲಿ ಸಿನಿಮಾ ಯಾಕೆ ಮಾಡುತ್ತೀರಿ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಇಂದು ವಿಶ್ವ ಮಟ್ಟದ ಸಿನಿ ಜಗತ್ತಿನಲ್ಲಿ ಮಾನ್ಯತೆ ಪಡೆದಿರೋ ಸ್ಟಾರ್ ಡೈರೆಕ್ಟರ್ ಗಳ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿದ್ದಾರೆ. ಪ್ರಶಾಂತ್ ನೀಲ್ ಕನ್ನಡದ ಹೆಮ್ಮೆಯ ನಿರ್ದೇಶಕ. ಕಥೆ ಹೆಣೆಯೋ ರೀತಿ, ಆ ಕಥೆಗೆ ಬಣ್ಣ ಕಟ್ಟೋ ಸ್ಟೈಲ್ ನೀಲ್‌ರನ್ನ ಟಾಪ್ ಡೈರೆಕ್ಟರ್ ಪಟ್ಟಕ್ಕೇರಿಸಿದೆ. ಇವರ ಸಿನಿಮಾಗಳು ಎಂದರೆ ಪ್ರೇಕ್ಷಕರ ಕಣ್ಣಿಗೆ ಅಕ್ಷರಶಃ ಹಬ್ಬದಂತೆ ಭಾಸವಾಗುತ್ತೆ. ಇಂತಹ ನೀಲ್ ಸಿನಿಮಾ ಮೇಕಿಂಗ್ ಬಗ್ಗೆ ಈಗ ಹೊಸದೊಂದು ಚರ್ಚೆ ಶುರುವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಮೂರು ಸಿನಿಮಾಗಳ ಪೋಸ್ಟರ್‌ ಒಂದೇ ಶೇಡ್, ಒಂದೇ ಸ್ಟೈಲ್‌ನಲ್ಲಿ ಕಾಣುತ್ತಿವೆ. ಒಂದೇ ಶೇಡ್ ನಲ್ಲಿ ಸಿನಿಮಾ ಯಾಕೆ ಮಾಡುತ್ತೀರಿ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

 

Video Top Stories